Latest

ಲೆಕ್ಕಾಧಿಕಾರಿ ವಿರುದ್ಧ ಸುಳ್ಳು ಲೈಂಗಿಕ ದೌರ್ಜನ್ಯ ದೂರು; ನಕಲಿ ವಿದ್ಯಾರ್ಥಿನಿಯರು ಸೇರಿ ನಾಲ್ವರ ಬಂಧನ

ಪ್ರಗತಿವಾಹಿನಿ ಸುದ್ದಿ; ಕೋಲಾರ: ಇಟಿಸಿಎಂ ಆಸ್ಪತ್ರೆಯ ಅಕೌಂಟೆಂಟ್ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಸುಳ್ಳು ಆರೋಪ ಮಾಡಿ ದೂರು ದಾಖಲಿಸಿದ್ದ ಪ್ರಕರಣ ಸಂಬಂಧ, ಚರ್ಚ್ ಫಾದರ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಕೋಲಾರ ಮಹಿಳಾ ಪೊಲೀಸರು ಬಂಧಿಸಿದ್ದಾರೆ.

ಕೋಲಾರ ಮಹಿಳಾ ಠಾಣೆಯಲ್ಲಿ ಆ.30ರಂದು ದೂರು ದಾಖಲಾಗಿತ್ತು. ಆಸ್ಪತ್ರೆ ಅಕೌಂಟೆಂಟ್ ಜಾನ್ಸನ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಇಬ್ಬರು ನಕಲಿ ವಿದ್ಯಾರ್ಥಿನಿಯರು ಆರೋಪಿಸಿದ್ದರು.

ದೂರು ದಾಖಲಿಸಿ ತನಿಖೆ ನಡೆಸಿದ ಪೊಲೀಸರಿಗೆ ಸತ್ಯಾಂಶ ಬಯಲಾಗಿದೆ. ಅಕೌಂಟೆಂಟ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಲ್ಲದೇ ದೂರು ನೀಡಿದವರು ಅಸಲಿಗೆ ವಿದ್ಯಾರ್ಥಿನಿಯರೇ ಅಲ್ಲ ಎಂಬುದು ಗೊತ್ತಾಗಿದೆ. ಅಲ್ಲದೇ ಚರ್ಚ್ ಫಾದರ್ ಹಾಗೂ ಹಾಸ್ಟೇಲ್ ವಾರ್ಡನ್ ಕೈವಾಡ ಕೂಡ ಇದರ ಹಿಂದಿದೆ ಎಂದು ತಿಳಿದುಬಂದಿದೆ.

ಇದೀಗ ಸುಳ್ಳು ಕೇಸ್ ದಾಖಲಿಸಿದ ಹಿನ್ನೆಲೆಯಲ್ಲಿ ಇಬ್ಬರು ನಕಲಿ ವಿದ್ಯಾರ್ಥಿನಿಯರು, ಹಾಸ್ಟೆಲ್ ವಾರ್ಡನ್, ಮೆಥೊಡಿಸ್ಟ್ ಚರ್ಚ್ ಫಾದರ್ ಶಾಂತಕುಮಾರ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಟ್ರ್ಯಾಕ್ಟರ್ ಹಾಯಿಸಿ ಗರ್ಭಿಣಿ ಕೊಲೆ “ಮಾನವ ದುರಂತ” ಎಂದ ಮಹೀಂದ್ರಾ ಸಿಇಒ ಅನೀಶ್ ಶಾ

https://pragati.taskdun.com/crime/mahindra-ceo-anishsha-tweet-humantragedy-killing-pregnant-woman-loan-recovery/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button