ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎನ್ನುವ ಸರ್ಕ್ಯೂಲರ್ ಸಾಮಾಜಿಕ ಜಾಲತಾಣಗಳಲ್ಲೆ ಕಳೆದ ಒಂದು ವಾರದಿಂದ ಹರಿದಾಡುತ್ತಿದೆ.
ಥೇಟ್ ಸರಕಾರಿ ಸುತ್ತೋಲೆ ರೀತಿಯಲ್ಲೇ ಇರುವ ಈ ಸುತ್ತೋಲೆ ಭಾರಿ ಗೊಂಲದ ಹುಟ್ಟಿಸಿತ್ತು. ಇದೊಂದು ಅಧಿಕೃತ ಸುತ್ತೋಲೆ ಎಂದೇ ಹಲವರು ಭಾವಿಸಿದ್ದರು. ಹಾಗೆಯೇ ಭಾರಿ ವೇಗವಾಗಿ ಶೇರ್ ಆಗಿತ್ತು.
ಪ್ರಗತಿವಾಹಿನಿ ಇದೊಂದು ಫೇಕ್ ಸರ್ಕ್ಯೂಲರ್ ( ಕಾಲೇಜುಗಳಿಗೆ ರಜೆ ಘೋಷಣೆ; ನಕಲಿ ಸುತ್ತೋಲೆ ) ಎಂದು ಸುದ್ದಿ ಪ್ರಕಟಿಸಿತ್ತು. ಇದೀಗ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಹೇಳಿಕೆ ನೀಡಿದ್ದು, ನಕಲಿ ಸರ್ಕ್ಯೂಲರ್ ತಯಾರಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.
ನಿನ್ನೆ ರಾಜ್ಯದಲ್ಲಿ ಲಾಕ್ ಡೌನ್ ಎನ್ನುವ ಅರ್ಥದ ವಿಡೀಯೋ ಕೂಡ ವಾಟ್ಸಪ್ ನಲ್ಲಿ ಹರಿದಾಡುತ್ತಿತ್ತು. ಇದು ಕೂಡ ಕಳೆದ ವರ್ಷದ ವಿಡೀಯೋ. ಈ ಕುರಿತು ಸಹ ಪ್ರಗತಿವಾಹಿನಿ ಸುದ್ದಿ ಪ್ರಕಟಿಸಿದೆ. ಹರಿದಾಡುತ್ತಿರುವ ವಿಡೀಯೋ ಫೇಕ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ