ಪ್ರಗತಿವಾಹಿನಿ ಸುದ್ದಿ, ಮಧ್ಯಪ್ರದೇಶ – ಸರಕಾರದ ಜಾಹೀರಾತಿಗಾಗಿ ಪ್ರಸರಣ ಸಂಖ್ಯೆಯನ್ನೇ ತಪ್ಪಾಗಿ ನಮೂದಿಸಿದ ಮಧ್ಯ ಪ್ರದೇಶದ ಮೂರು ಪತ್ರಿಕೆಗಳು ಈಗ ಸಿಬಿಐ ಗಾಳಕ್ಕೆ ಸಿಲುಕಿವೆ.
ಪತ್ರಿಕೆಗಳ ಪ್ರಸರಣ ಸಂಖ್ಯೆಯ ಆಧಾರದಲ್ಲಿ ಸರಕಾರಿ ಜಾಹೀರಾತುಗಳ ದರ ನಿರ್ಧಾರವಾಗುತ್ತವೆ. ಈ ಹಿನ್ನೆಲೆಯಲ್ಲಿ ಹೆಚ್ಚು ಜಾಹೀರಾತು ಪಡೆಯಲು ಜಬ್ಬಲ್ಪುರ ಮೂಲದ ಒಂದು ಪತ್ರಿಕೆ ಮತ್ತು ಸಿಯೋನಿಯ ಎರಡು ಪತ್ರಿಕೆಗಳು ಪ್ರಸರಣ ಸಂಖ್ಯೆಯಲ್ಲಿ ತಪ್ಪು ಲೆಕ್ಕ ತೋರಿಸಿವೆ ಎಂದು ಸಿಬಿಐ ತನ್ನ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಿರುವ ಎಫ್ ಐ ಆರ್ ನಲ್ಲಿ ಉಲ್ಲೇಖಿಸಿದೆ.
ಕಳೆದ ಆ. 13 ರಂದು ಸಿಬಿಐನ ಜಬ್ಬಲ್ ಪುರ ಕಚೇರಿಯಲ್ಲಿ ಹಿಮಾಂಶು ಎಂಬುವವರು ಸಲ್ಲಿಸಿದ ದೂರಿನ ಆಧಾರದಲ್ಲಿ ವಂಚನೆ ಆರೋಪದಡಿ ಈ ಮೂರು ಪತ್ರಿಕೆಗಳ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಪ್ರಸಾರಕ್ಕೆ ಸಂಬಂಧಿಸಿ ನಕಲಿ ವರದಿ ನೀಡಿ ಈ ಪತ್ರಿಕೆಗಳು ಕೇಂದ್ರ ಸರಕಾರದ ಏಜೆನ್ಸಿಯ ಮೂಲಕ ಲಕ್ಷಾಂತರ ರೂ. ಮೌಲ್ಯದ ಜಾಹೀರಾತು ಪಡೆಯುತ್ತಿವೆ ಎಂದು ಹಿಮಾಂಶು ಅವರು ದೂರಿನಲ್ಲಿ ಆರೋಪಿಸಿದ್ದರು.
ದಸರಾ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಪ್ರವಾಸೋದ್ಯಮ ಜಾಲ: ಸಿಎಂ ಬಸವರಾಜ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ