Kannada NewsKarnataka NewsLatest
*ಪ್ರತಿಷ್ಠಿತ ಕಂಪನಿಯ ಡಿಟರ್ಜೆಂಟ್ ಪೌಡರ್ ನಕಲು: ಫ್ಯಾಕ್ಟರಿ ಸೀಜ್; ಓರ್ವನ ಬಂಧನ*

ಪ್ರಗತಿವಾಹಿನಿ ಸುದ್ದಿ: ಪ್ರತಿಷ್ಠಿತ ಕಂಪನಿಗಳ ಡಿಟರ್ಜಂತ್ ಫೌಡರ್ ಗಳನ್ನು ನಕಲು ಮಾಡಿ ತಯಾರಿಸುತ್ತಿದ್ದ ಫ್ಯಾಕ್ಟರಿ ಮೇಲೆ ದಾಳಿ ನಡೆಸಿದ ಬೆಂಗಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರು ಫ್ಯಾಕ್ಟರಿ ಸೀಜ್ ಮಡಿದ್ದಾರೆ.
ಹಿಂದೂಸ್ತಾನ್ ಯುನಿ ಲಿವರ್ ಸಂಸ್ಥೆ ನೀಡಿದ ಮಹಿತಿ ಆಧಾರದ ಮೇಲೆ ಮಲ್ಲೇಶ್ವರಂ ಪೊಲೀಸರು ಬೆಂಗಳೂರಿನ ಮಾದನಾಯಕನಹಳ್ಳಿಯ ಫ್ಯಾಕ್ಟರಿ ಮೇಲೆ ದಾಳಿ ನಡೆಸಿದ್ದರು. ಡಿಟರ್ಜಂಟ್ ಪೌಡರ್ ನಕಲಿಯಾಗಿ ತಯಾರಿಸಲು ಬಳಸುತ್ತಿದ್ದ 15 ಲಕ್ಷ ಮೌಲ್ಯದ ಮಿಕ್ಸಿಂಗ್ ಯಂತ್ರ, ವಿವಿಧ ಕಂಪನಿಯ ಲೇಬಲ್ ಗಳನ್ನು ಜಪ್ತಿ ಮಾಡಲಾಗಿದೆ.
ಫ್ಯಾಕ್ಟರಿ ನಡೆಸುತ್ತಿದ್ದ ಅರ್ಜುನ್ ಜೈನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ