Belagavi NewsBelgaum NewsKannada NewsKarnataka NewsNationalPolitics

*ನಕಲಿ ಗಾಂಧಿಗಳು ದೇಶದ ಜನರ ದಿಕ್ಕು ತಪ್ಪಿಸುವ ತಂತ್ರ ಹೆಣೆಯುತ್ತಿದ್ದಾರೆ: ಈರಣ್ಣ ಕಡಾಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶದ ಸ್ವಾತಂತ್ರ್ಯಾನಂತರ ಗಾಂಧಿ ಹೆಸರಿನಿಂದಲೇ ರಾಜಕೀಯ ಬೆಳೆ ಬೆಳೆಸುತ್ತಿರುವ ಕಾಂಗ್ರೇಸ್ ಪಕ್ಷ ವಿಬಿ ಜಿ ರಾಮ್ ಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಾತ್ಮಾ ಗಾಂಧಿ ಹೆಸರು ಕೈ ಬಿಟ್ಟಿದ್ದಕ್ಕೆ ಕಾಂಗ್ರೆಸ್ ಪಕ್ಷ ಮತ್ತು ನಕಲಿ ಗಾಂಧಿಗಳು ದೇಶದ ಜನರ ದಿಕ್ಕು ತಪ್ಪಿಸುವ ತಂತ್ರ ಹೆಣೆಯುತ್ತಿದ್ದಾರೆ. ಮನರೇಗಾ ಕೆಲವು ರಾಜ್ಯಗಳಿಗೆ ಬಂಗಾರದ ಮೊಟ್ಟೆ ಇಡುವ ಯೋಜನೆಯಾಗಿತ್ತು ಕೇಂದ್ರದ ಬದಲಾವಣೆಯಿಂದಾಗಿ ಅವು ಸಂಕಷ್ಟಕ್ಕೆ ಸಿಲುಕಿವೆ ಮತ್ತು ಯೋಜನೆಯಲ್ಲಿನ ಅಂಶಗಳ ಬದಲಾವಣೆ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿಲ್ಲ. ಕೇವಲ ಗಾಂಧಿ ಹೆಸರು ತೆಗೆದಿದ್ದಕ್ಕೆ ಇವರು ವಿರೋಧಿಸುತ್ತಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ತಾಲೂಕಿನ ನಲ್ಲಾನಟ್ಟಿ ಸಂಸದರ ಆದರ್ಶ ಗ್ರಾಮದಲ್ಲಿ ಹಿಂದೂಸ್ತಾನ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿ.ಎಸ್.ಆರ್) ಯೋಜನೆಯಡಿ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಮಂಜೂರಾದ ಒಟ್ಟು 9.35 ಲಕ್ಷ ರೂ.ಗಳ ಶಾಲಾ ಸಲಕರಣೆಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

ಹಿಂದಿನ ನರೇಗಾ ಯೋಜನೆಯಲ್ಲಿ ಪ್ರತಿ ವರ್ಷ 100 ದಿನಗಳ ಉದ್ಯೋಗ ಖಾತ್ರಿ ಇತ್ತು. ಈಗ ಅದನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಒಂದು ವಾರದಿಂದ ಹದಿನೈದು ದಿನಗಳ ಒಳಗೆ ಕಡ್ಡಾಯವಾಗಿ ಕಾರ್ಮಿಕರ ವೇತನ ಕೊಡುವ ಬಗ್ಗೆ ಸ್ಪಷ್ಟಪಡಿಸಲಾಗಿದೆ. ಈ ಯೋಜನೆಯಡಿ ಕಾಮಗಾರಿಗೆ ಎಐ ತಂತ್ರಜ್ಞಾನ ಆಧಾರಿತ ಹಾಜರಾತಿ, ಯಂತ್ರೋಪಕರಣ ಬಳಕೆ ನಿಷೇಧಿಸಿದೆ. ಶೇ.60 ಕೇಂದ್ರ ಮತ್ತು ಶೇ.40 ರಾಜ್ಯ ಸರ್ಕಾರ ಅನುದಾನವಿರುವುದರಿಂದ ಸರ್ಕಾರಕ್ಕೆ ಜವಾಬ್ದಾರಿ ಬೇಕು ಎನ್ನುವುದಕ್ಕೆ ರಾಜ್ಯ ಸರ್ಕಾರಗಳ ಪಾಲು ಹೆಚ್ಚಿಸಲಾಗಿದೆ ಎಂದರು.

ಉದ್ಯೋಗ ಖಾತ್ರಿ ಯೋಜನೆ ಹಲವು ವರ್ಷಗಳಿಂದ ಜಾರಿಯಲ್ಲಿದ್ದು, ಅಧಿಕಾರದಲ್ಲಿರುವ ಪಕ್ಷಗಳು ಕಾಲ ಕಾಲಕ್ಕೆ ಹಲವು ಬದಲಾವಣೆಗಳೊಂದಿಗೆ ಯೋಜನೆ ಅನುಷ್ಠಾನ ಮಾಡಿವೆ. ಜವಾಹರ ರೋಜ್‌ಗಾರ ಯೋಜನೆ, ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಈಗ ವಿಕಸಿತ ಭಾರತ ಸಂಕಲ್ಪದೊಂದಿಗೆ ವಿಬಿ-ಜಿ-ರಾಮ ಜಿ ಎಂದು ಪ್ರಮುಖ ಅಂಶಗಳನ್ನು ಅಳವಡಿಸಿಕೊಂಡು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬದಲಾವಣೆ ಮಾಡಿದೆ. ಎಂದರು.

Home add -Advt

ಬೆಳಗಾವಿ ವಿಭಾಗದ ಎಚ್.ಪಿ.ಸಿ.ಎಲ್ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ  ವಿನಯಕಾಂತ ಅಬಿಗೇರಿ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ, ಸೇಲ್ಸ್ ಅಧಿಕಾರಿ ಸಾಯಿ ಚರಣ,  ಪರಪ್ಪ ಮೇಲ್ಮಟ್ಟಿ, ಧಶರಥ ಕುಳ್ಳೂರ, ರಾಯಪ್ಪ ಬೆಳಗಲಿ, ದಾನಪ್ಪ ಕುಳ್ಳೂರ, ಹನಮಂತ ಪಾಟೀಲ, ಮುತ್ತೆಪ್ಪ ಪಾಟೀಲ, ದಶರಥ ಪಾಟೀಲ, ಮಲ್ಲಪ್ಪ ಪೂಜೇರಿ, ಮುದಕಪ್ಪ ಗದಾಡಿ, ಲಗಮಣ್ಣ ಕುಳ್ಳೂರ, ವಿಷ್ಣು ಕುಳ್ಳೂರ, ಮಾರುತಿ ಮೆಳವಂಕಿ, ಪ್ರಕಾಶ ಜಾಗನೂರ, ರಂಗಪ್ಪ ಕುಳ್ಳೂರ, ಶ್ರೀಶೈಲ ಪೂಜೇರಿ ಸೇರಿದಂತೆ ಸ್ಥಳೀಯ ಮುಖಂಡರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Back to top button