ಕಾರಲ್ಲಿ ಕುಳಿತು ಬೆಂಕಿ ಹಚ್ಚಿಕೊಂಡು ಉದ್ಯಮಿ ಆತ್ಮಾಹುತಿ

ಪ್ರಗತಿವಾಹಿನಿ ಸುದ್ದಿ, ನಾಗಪುರ: ಉದ್ಯಮಿಯೊಬ್ಬರು ಕಾರಿಗೆ ಬೆಂಕಿ ಹಚ್ಚಿಕೊಂಡು ಅದರಲ್ಲಿ ಕುಳಿತು ಆತ್ಮಾಹುತಿ ಮಾಡಿಕೊಂಡಿದ್ದಾರೆ.

ಕುಟುಂಬ ಸಹಿತ ಸಜೀವ ದಹನವಾಗುವ ಅವರ ಉದ್ದೇಶ ವಿಫಲವಾಗಿದ್ದು ಪತ್ನಿ ಹಾಗೂ ಪುತ್ರ ಸಕಾಲಕ್ಕೆ ಕಾರಿನಿಂದ ಹೊರಬಂದು ಬಚಾವಾಗಿದ್ದಾರೆ.

Home add -Advt

ಮಹಾರಾಷ್ಟ್ರದ ನಾಗಪುರದ ಬೆಲ್ತಾರೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಜೈತಾಲಾದ ರಾಮರಾಜ ಗೋಪಾಲಕೃಷ್ಣ ಭಟ್ (58) ಮೃತಪಟ್ಟ ಉದ್ಯಮಿ. ಪತ್ನಿ ಸಂಗೀತಾ ಭಟ್ (55) ಪುತ್ರ ನಂದನ್ (30) ಅಪಾಯದಿಂದ ಪಾರಾದವರು.

ಇತ್ತೀಚಿನ ದಿನಗಳಲ್ಲಿ ಉದ್ಯಮದಲ್ಲಿ ಭಾರೀ ನಷ್ಟ ಅನುಭವಿಸಿದ ರಾಮರಾಜ ಭಟ್ ಜೀವನದಲ್ಲಿ ಜುಗುಪ್ಸೆಗೊಂಡಿದ್ದಾರೆ. ಕುಟುಂಬ ಸಹಿತ ಆತ್ಮಾಹುತಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದ ಅವರು ಊಟಕ್ಕೆ ಹೋಟೆಲ್ ಗೆ ಹೋಗುವ ಕಾರ್ಯಕ್ರಮ ಇಟ್ಟುಕೊಂಡು ಪತ್ನಿ, ಪುತ್ರನನ್ನು ನಂಬಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.

ಖಾಪ್ರಿ ಪುನರ್ವಸನ್ ಬಳಿ ಬರುತ್ತಲೇ ಕಾರು ನಿಲ್ಲಿಸಿ ಏಕಾಏಕಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡ ರಾಮರಾಜ, ಪತ್ನಿ, ಪುತ್ರನ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಕಾರಿನ ಬಾಗಿಲು ತೆಗೆದು ಪತ್ನಿ ಪುತ್ರ ಹೊರ ಬಂದು ಆಗಲೇ ಸಣ್ಣದಾಗಿ ಹೊತ್ತಿಕೊಂಡ ಬೆಂಕಿಯನ್ನು ಆರಿಸಿಕೊಂಡಿದ್ದಾರೆ. ಆದರೆ ರಾಮರಾಜ್ ಭಟ್ ಮಾತ್ರ ಕಾರಲ್ಲೇ ಕುಳಿತು ಕಾರು ಸಹಿತ ದಹನವಾಗಿದ್ದಾರೆ.

ರಾಮರಾಜ್ ಅವರು ಬರೆದಿಟ್ಟ ಡೆತ್ ನೋಟ್ ಒಂದರಿಂದಾಗಿ ಅವರದು ಆತ್ಮಾಹುತಿ ಯತ್ನವಾಗಿತ್ತೆಂಬುದು ಬಯಲಿಗೆ ಬಂದಿದೆ.  ಬೆಲ್ತಾರೋಡಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಿತ್ರರಿಗಾಗಿ ಮಾಡಿದ ಚಿತ್ರ ಮಿತ್ರತ್ವಕ್ಕೇ ಕೇಡು: ರಣಬೀರ್ ಕಪೂರ್

Related Articles

Back to top button