Belagavi NewsBelgaum NewsCrimeKannada NewsKarnataka NewsNationalPolitics

*ಉದ್ಯಮಬಾಗ ಪೊಲೀಸರ ಭರ್ಜರಿ ಬೇಟೆ: 1 ಕೆಜಿಗೂ ಅಧಿಕ ಗಾಂಜಾ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಉದ್ಯಮಬಾಗ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿ 60,000 ರೂ ಮೌಲ್ಯದ 1 ಕೆ.ಜಿ 212 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಸಾಗರ ಸುರೇಶ ಮೋರೆ (29) ಬಂಧಿತ ಆರೋಪಿ, ಬೆಳಗಾವಿ ನಗರದ ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಉತ್ಸವ ಕ್ರಾಸ್ ಡಬಲ್ ರಸ್ತೆಯ ಪಕ್ಕದಲ್ಲಿರುವ ಪೌಂಡ್ರಿ ಕ್ಲಸ್ಟರ್ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಉದ್ಯಮಬಾಗ ಪೊಲೀಸು ದಾಳಿ ಮಾಡಿ ಆರೋಪಿ ಬಳಿ ಇದ್ದ 60,000 ರೂ ಮೌಲ್ಯದ 01 ಕೆ.ಜಿ 212 ಗ್ರಾಂ ತೂಕದ ಗಾಂಜಾ, 8,000 ರೂ ಮೋಬೈಲ್, 310 ರೂ ನಗದು ಹಣ ಹಾಗೂ 35,000 ರೂ. ಮೌಲ್ಯದ ಬೈಕ್ ಹೀಗೆ ಒಟ್ಟು 1,03,310 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ವಿರುದ್ದ ಉದ್ಯಮಬಾಗ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 80/2026 ಕಲಂ 20(b)(ii)(B) ಎನ್‌ಡಿಪಿಎಸ್ ಕಾಯ್ದೆ-1985 ನೇದ್ದರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಈ ತಂಡದಲ್ಲಿ ಕೆಲಸ ಮಾಡಿದ ಸಿಪಿಐ ಮಹಾಂತೇಶ ವಿ ಹೊಸಪೇಟಿ, ಪಿಎಸ್ಐ ಪ್ರವೀಣ ಬಿರಾದರ ಹಾಗೂ ಸಿಬ್ಬಂದಿ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button