*ದೆಹಲಿ-ಹುಬ್ಬಳ್ಳಿ, ದೆಹಲಿ-ಬೆಳಗಾವಿ ಮಧ್ಯೆ ಇನ್ನು ನಿತ್ಯವೂ ವಿಮಾನ ಸಂಚಾರ* *Daily Flights to Operate Between Delhi-Hubballi and Delhi-Belagavi*

*ದೆಹಲಿ-ಹುಬ್ಬಳ್ಳಿ, ದೆಹಲಿ-ಬೆಳಗಾವಿ ಮಧ್ಯೆ ಇನ್ನು ನಿತ್ಯವೂ ವಿಮಾನ ಸಂಚಾರ*
* ಸಚಿವ ಪ್ರಲ್ಹಾದ ಜೋಶಿ ಮನವಿಗೆ ಸ್ಪಂದಿಸಿದ ಇಂಡಿಗೋ ಏರ್‌ಲೈನ್ಸ್
* ಅಕ್ಟೋಬರ್ 1ರಿಂದಲೇ ಈ ಮಹಾ ನಗರಗಳ ಮಧ್ಯೆ ಎರಡು ವಿಮಾನಗಳ ಸಂಚಾರ ಶುರು
ನವದೆಹಲಿ: ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಪ್ರಯಾಣಿಕರಿಗಾಗಿ ಇಂಡಿಗೋ ಏರ್‌ಲೈನ್ಸ್ ಸಂಸ್ಥೆ ದೆಹಲಿ-ಹುಬ್ಬಳ್ಳಿ ಮತ್ತು ದೆಹಲಿ-ಬೆಳಗಾವಿ ಮಧ್ಯೆ ಪ್ರತಿನಿತ್ಯ ವಿಮಾನ ಸೇವೆ ಆರಂಭಿಸುವ ಸಿಹಿ ಸುದ್ದಿ ನೀಡಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಂಡಿಗೋ ಏರ್‌ಲೈನ್ಸ್ ಅಕ್ಟೋಬರ್ 1ರಿಂದಲೇ ಪ್ರತಿದಿನ ವಿಮಾನ ಸಂಚಾರ ಆರಂಭಿಸುವುದಾಗಿ ಪ್ರಕಟಿಸಿದೆ. ಈ ಮೂಲಕ ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕರ್ನಾಟಕದ ಜನತೆಗೆ ಸಿಹಿ ಸುದ್ದಿ ನೀಡಿದೆ.
ಈ ಮಹಾನಗರಗಳ ಪ್ರಯಾಣಿಕರ ಅನುಕೂಲ ಹಾಗೂ ಜನರ ಬೇಡಿಕೆ ಗಮನದಲ್ಲಿಟ್ಟುಕೊಂಡು ಸಚಿವ ಪ್ರಲ್ಹಾದ ಜೋಶಿ ಅವರು ದೆಹಲಿ-ಹುಬ್ಬಳ್ಳಿ ಹಾಗೂ ದೆಹಲಿ-ಬೆಳಗಾವಿ ನಡುವೆ ದೈನಂದಿನ ವಿಮಾನ (ಪ್ರತಿ ದಿನ) ಸೇವೆ ಆರಂಭಿಸುವಂತೆ ಇತ್ತೀಚೆಗೆ ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳ ಗಮನ ಸೆಳೆದಿದ್ದರು.
ಸಚಿವರ ಮನವಿಗೆ ತ್ವರಿತ ಸ್ಪಂದನೆ ನೀಡಿರುವ ಇಂಡಿಗೋ ಸಂಸ್ಥೆ ಅಕ್ಟೋಬರ್ 1ರಿಂದಲೇ ಪ್ರತಿದಿನ ದೆಹಲಿ–ಹುಬ್ಬಳ್ಳಿ ಹಾಗೂ ದೆಹಲಿ–ಬೆಳಗಾವಿ ಮಧ್ಯೆ ನೇರ ವಿಮಾನ ಸೇವೆ ಆರಂಭಿಸುವುದಾಗಿ ತಿಳಿಸಿದೆ.
*ವಿಮಾನ ಸೇವೆ ವೇಳೆ:* Flight No: 6E758ರ ವಿಮಾನ ನಿತ್ಯವೂ ಸಂಜೆ 4:30ಕ್ಕೆ ದೆಹಲಿಯಿಂದ ಹೊರಟು ಸಂಜೆ 6:55ಕ್ಕೆ ಹುಬ್ಬಳ್ಳಿ ತಲುಪಲಿದೆ. Flight No: 6E2115ರ ವಿಮಾನ ಸಂಜೆ 7:30ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 10:05ಕ್ಕೆ ದೆಹಲಿ ತಲುಪಲಿದೆ.
ಅಂತೆಯೇ Flight No: 6E2511ರ ವಿಮಾನ ಬೆಳಗ್ಗೆ 6:15ಕ್ಕೆ ದೆಹಲಿಯಿಂದ ಹೊರಟು 8:40ಕ್ಕೆ ಬೆಳಗಾವಿ ತಲುಪಲಿದೆ. Flight No: 6E2512ರ ವಿಮಾನ ಬೆಳಗ್ಗೆ 9:10ಕ್ಕೆ ಬೆಳಗಾವಿಯಿಂದ ಹೊರಟು 11:40ಕ್ಕೆ ದೆಹಲಿ ತಲುಪಲಿದೆ. ಈ ಎರಡೂ ವಿಮಾನಗಳು ಅಕ್ಟೋಬರ್ 1ರಿಂದ ಪ್ರತಿದಿನ ಸಂಚಾರ ಆರಂಭಿಸಲಿವೆ.
*ಉತ್ತರ ಕರ್ನಾಟಕ ಜನತೆಗೆ ಅನುಕೂಲ:* ಪ್ರತಿ ದಿನವೂ ವಿಮಾನ ಸಂಚಾರದಿಂದ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರಗಳಲ್ಲಿ ವ್ಯಾಪಾರ, ಉದ್ಯೋಗ, ಶಿಕ್ಷಣ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ, ಸಂಪರ್ಕ ವ್ಯವಸ್ಥೆಯ ಬಲವರ್ಧನೆಗೆ ನಮ್ಮ ಪ್ರಯತ್ನ ನಿರಂತರವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.
Daily Flights to Operate Between Delhi-Hubballi and Delhi-Belagavi
IndiGo responds positively to Union Minister Pralhad Joshi’s request
Two daily flight services to commence between the cities from October 1
New Delhi: IndiGo Airlines has announced daily flight services between Delhi and Hubballi, and Delhi and Belagavi, bringing good news to passengers from Hubballi-Dharwad, Belagavi and other parts of North Karnataka.
Responding positively to the request of Union Minister for Consumer Affairs Pralhad Joshi, IndiGo has announced that the daily services on both routes will commence from October 1.
Keeping in view the convenience of passengers and the growing demand for air connectivity between these major cities, Minister Pralhad Joshi had recently urged IndiGo officials to introduce daily direct flights between Delhi-Hubballi and Delhi-Belagavi.
Responding promptly to the Minister’s request, IndiGo has confirmed that direct daily flight services on both routes will begin from October 1.
Flight Timings
Delhi–Hubballi:
Flight No. 6E758 will depart from Delhi daily at 4:30 pm and arrive in Hubballi at 6:55 pm.
Flight No. 6E2115 will depart from Hubballi at 7:30 pm and arrive in Delhi at 10:05 pm.
Delhi–Belagavi:
Flight No. 6E2511 will depart from Delhi at 6:15 am and arrive in Belagavi at 8:40 am.
Flight No. 6E2512 will depart from Belagavi at 9:10 am and arrive in Delhi at 11:40 am.
Both services will operate daily from October 1.
Boost to North Karnataka
The introduction of daily flights is expected to provide a major boost to Hubballi-Dharwad and Belagavi, particularly in the fields of business, employment, education and tourism. Improved air connectivity with the national capital will also benefit passengers from across North Karnataka.
“Our efforts to promote the development of North Karnataka and strengthen connectivity will continue,” Union Minister Pralhad Joshi said in response to the announcement.


