Belagavi NewsBelgaum NewsCrimeKannada NewsKarnataka NewsNational

*ಅಕ್ರಮವಾಗಿ ಮದ್ಯ ಮಾರುತ್ತಿದ್ದ ಆರೋಪಿಯ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬೆಳಗಾವಿಯ ಮಾರಿಹಾಳ ಪೊಲೀಸರು ಬಂಧಿಸಿದ್ದಾರೆ.

ಬಾಳಪ್ಪ ದ್ಯಾಮಪ್ಪ ನಿಟ್ಟೂರ (42) ಬಂಧಿತ ಆರೋಪಿ. ಬೆಳಗಾವಿಯ ​ಚಂದೂರ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ, ಆರೋಪಿಯನ್ನು ಹೋಳೆಮ್ಮದೇವಿ ದಾಬಾ ಹತ್ತಿರ ಕಾನೂನುಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ಬಂಧಿಸಿದ್ದಾರೆ. 

Home add -Advt

ಆರೋಪಿಯು ಯಾವುದೇ ಪರವಾನಗಿ ಇಲ್ಲದೆ ಸರಾಯಿ ಮಾರುತ್ತಿದ್ದ. ಆರೋಪಿಯಿಂದ 88 ಮದ್ಯದ ಟೆಟ್ರಾ ಪ್ಯಾಕ್ ಜಪ್ತಿ ಮಾಡಲಾಗಿದೆ.‌ ಈ ಬಗ್ಗೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 

Related Articles

Back to top button