Film & EntertainmentNational

*ತಮಿಳು ನಟ ವಿಜಯ್ ಗೆ ಶಾಕ್: ಫತ್ವಾ ಹೊರಡಿಸದ ಮುಸ್ಲಿಂ ಮುಖಂಡ*

ಪ್ರಗತಿವಾಹಿನಿ ಸುದ್ದಿ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ಮತ್ತು ನಟ ವಿಜಯ್ ದಳಪತಿ ಅವರು ತಮ್ಮ ಇಫ್ತಾರ್ ಕೂಟಕ್ಕೆ ಮದ್ಯವ್ಯಸನಿಗಳು ಮತ್ತು ಜೂಜುಕೋರರು ಸೇರಿದಂತೆ ಸಮಾಜವಿರೋಧಿಗಳನ್ನು ಆಹ್ವಾನಿಸಿದ್ದಾರೆ ಎಂಬ ಆರೋಪದ ನಂತರ ಅವರ ವಿರುದ್ಧ ಫತ್ವಾ ಹೊರಡಿಸಲಾಗಿದೆ.

ನಟ ವಿಜಯ್ ದಳಪತಿ ಅವರ ವಿರುದ್ಧ ಫತ್ವಾ ಹೊರಡಿಸಿದ್ದು ಅಖಿಲ ಭಾರತ ಮುಸ್ಲಿಂ ಜಮಾಅತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ಜಿ. “ತಮಿಳುನಾಡಿನ ಮುಸ್ಲಿಮರು… ವಿಜಯ್ ಅವರೊಂದಿಗೆ ಸಹಾನುಭೂತಿ ಹೊಂದಬಾರದು ಎಂದು ನಾನು ಒತ್ತಾಯಿಸುತ್ತೇನೆ” ಎಂದು ಶಹಾಬುದ್ದೀನ್ ರಜ್ಜಿ ಹೇಳಿದ್ದಾರೆ.

Home add -Advt

ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ವಿಜಯ್ ಮುಸ್ಲಿಮರೊಂದಿಗೆ ಒಡನಾಡುತ್ತಿದ್ದರೂ ತಮ್ಮ ಚಲನಚಿತ್ರಗಳಲ್ಲಿ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುವಂಥಹ ಸನ್ನಿವೇಶಗಳಲ್ಲಿ ನಟನೆ ಮಾಡಿದ್ದಾರೆ. ಅವರು ತಮ್ಮ ಚಲನಚಿತ್ರಗಳಲ್ಲಿ ಮುಸ್ಲಿಮರನ್ನು ಭಯೋತ್ಪಾದನೆ ಹರಡುವವರಂತೆ ನಕಾರಾತ್ಮಕ ರೀತಿಯಲ್ಲಿ ಬಿಂಬಿಸಿದ್ದರು ಎಂದು ರಜ್ಜಿ ಆರೋಪಿಸಿದ್ದಾರೆ.

Related Articles

Back to top button