ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕರಿಗೆ 100 ಕೋಟಿ ಕಪ್ಪು ಹಣವಿದೆ ಎಂದು ನಂಬಿಸಿ, ನಕಲಿ ನೋಟುಗಳನ್ನ ತೋರಿಸಿ ಮೋಸ ಮಾಡುತ್ತಿದ್ದ ಐವರನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಮತ್ತು ಸಿಬ್ಬಂಧಿ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟ್ರಸ್ಟ್ ಗಳಿಗೆ ಯಾವುದೇ ಲಾಂಭಾಂಶವಿಲ್ಲದೇ ಹಣವನ್ನ ವರ್ಗಾಯಿಸುವುದಾಗಿ ನಂಬಿಸಿ, ಅದಕ್ಕೆ ಪ್ರತಿಯಾಗಿ 10% ಕಮಿಷನ್ ನೀಡಬೇಕು ಎಂದು ತಿಳಿಸಿ, ಒಂದು ಪಾರ್ಟಿ ಬಳಿ ಇರುವ ಕಪ್ಪು ಹಣವನ್ನ ವಿಡಿಯೋ ಕಾಲ್ ಮೂಲಕ ತೋರಿಸಲು ನೀವು ನಮಗೆ ಕಮಿಷನ್ ಎಂದು 25 ಲಕ್ಷ ಮುಂಗಡವಾಗಿ ಕೊಡಬೇಕು ಎಂದು ಬೇಡಿಕೆ ಇಟ್ಟಿರುತ್ತಾರೆ. ಈ ವೇಳೆ ಪಿರ್ಯಾದುದಾರನಿಗೆ ವ್ಯಕ್ತಿಯ ಮೇಲೆ ಅನುಮಾನಗೊಂಡು ಪೊಲೀಸ್ ಠಾಣೆಗೆ ಏಪ್ರಿಲ್ 1 ರಂದು ದೂರು ನೀಡುತ್ತಾನೆ, ದೂರಿನ ಅನ್ವಯ ಸೋಮವಾರ ಮಧ್ಯಾಹ್ನ 12 ಗಂಟೆಗೆ ಪೊಲೀಸರು ಐವರನ್ನ ಬಂಧಿಸಿ, ನಕಲಿ ಹಣವನ್ನ ವಶಕ್ಕೆ ಪಡೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ