VTU Add
Beereshwara 36
LaxmiTai 5

*ನಕಲಿ ನೋಟುಗಳ ಹಾವಳಿ; ಬ್ಯಾಂಕ್ ಮ್ಯಾನೇಜರ್ ಗಳ ವಿರುದ್ಧವೇ ದೂರು ದಾಖಲಿಸಿದ RBI*

Anvekar 3

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರು, ಹುಬ್ಬಳ್ಳಿ, ಉಡುಪಿ, ಮಣಿಪಾಲ್ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದ್ದು, ಆರ್ ಬಿಐ ಬ್ಯಾಂಕ್ ಮ್ಯಾನೇಜರ್ ಗಳ ವಿರುದ್ಧವೇ ದೂರು ದಾಖಲಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಮಲ್ಲೇಶ್ವರಂ, ಉಡುಪಿ, ಹುಬ್ಬಳ್ಳಿ, ಮಣಿಪಾಲ್ ಬ್ಯಾಂಕ್ ಗಳ ಬ್ರ್ಯಾಂಚ್ ಗಳಲ್ಲಿ ಆರ್ ಬಿಐ ರಿಮೀಟ್ ಮಾಡುವಾಗ 100 ರೂಪಾಯಿ ಮುಖ ಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ. ಒಟ್ಟು 30 ನೋಟುಗಳು ಪತ್ತೆಯಾಗಿದ್ದು, ಎರಡು ದಿನಗಳಲ್ಲಿ 4 ಎಫ್ ಐ ಆರ್ ದಾಖಲಾಗಿದೆ.

Emergency Service

ಇದೀಗ ನಕಲಿ ನೋಟು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಬಿಐ ಮ್ಯಾನೇಜರ್ ಆನಂದ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಯುಬಿಐ ಬ್ಯಾಂಕ್ ಮ್ಯಾನೇಜರ್ ಗಳ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Cancer Hospital 2
Bottom Add3
Bottom Ad 2