ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಲಾಕ್ ಡೌನ್ ವೇಳೆ ಖೋಟಾನೋಟು ಮುದ್ರಣ ಮಾಡಿ ಬಳಿಕ ಚಲಾವಣೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಜಮಾಲ್, ಇಮ್ರಾನ್, ಮುಬಾರಕ್ ಎಂದು ಗುರುತಿಸಲಾಗಿದೆ.
ಆಟೋ ಚಾಲಕರೊಬ್ಬರಿಗೆ ಜಮಾಲ್ ಎಂಬಾತ 100 ರೂ ಮುಖಬೆಲೆಯ ಖೋಟಾನೋಟು ನೀಡಿದ್ದ. ಅನುಮಾನಗೊಂಡ ಚಾಲಕ ನೋಟನ್ನು ಪೊಲೀಸ್ ಠಾಣೆಗೆ ತಂದು ಪೊಲೀಸರಲ್ಲಿ ವಿಚಾರಿಸಿದ್ದಾನೆ. ಈ ವೇಳೆ ಜಮಾಲ್ ಎಂಬಾತನನ್ನು ಬಂಧಿಸಿ ವಿಚಾರಿಸಿದಾಗ ಖೋಟಾನೋಟು ಜಾಲದ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಜಮಾಲ್ ಮಾಹಿತಿ ಆಧರಿಸಿ ಪಾದರಾಯನಪುರದ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಮತ್ತಿಬ್ಬರು ಆರೋಪಿಗಳಾದ ಇಮ್ರಾನ್ ಹಾಗೂ ಮುಬಾರಕ್ ರನ್ನು ಬಂಧಿಸಿದ್ದಾರೆ. 100 ರೂ ಮುಖಬೆಲೆಯ ಲಕ್ಷಾಂತರ ರೂ. ಖೋಟಾನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ