Belagavi NewsBelgaum NewsKannada NewsKarnataka News

ಬೆಳಗುಂದಿಯಲ್ಲಿ  ಸತ್ಕಾರ: ಭಾವುಕರಾದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳಗುಂದಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಭಾನುವಾರ ಸಂಜೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಸತ್ಕಾರ ಸಮಾರಂಭ ಆಯೋಜಿಸಲಾಗಿತ್ತು.

ನಿಮ್ಮ ಪ್ರೀತಿಯ ಧ್ಯೋತಕವಾಗಿ ನನ್ನನ್ನು ಸನ್ಮಾನಿಸಿದ್ದೀರಿ. ಆದರೆ ವಾಸ್ತವದಲ್ಲಿ ನನ್ನ ಮೇಲೆ ನಿಮ್ಮ ಋಣವಿದೆ. ನನ್ನನ್ನು ಅತ್ಯಧಿಕ ಬಹುಮತದಿಂದ ಆಯ್ಕೆ ಮಾಡಿದ್ದರಿಂದಲೇ ನಾನು ಇಂದು ರಾಜ್ಯದ ಮಂತ್ರಿಯಾಗಲು ಸಾಧ್ಯವಾಗಿದೆ. ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಮೂಲಕ ನಾನು ನಿಮ್ಮೆಲ್ಲರ ಋಣವನ್ನು ತೀರಿಸುವ ಪ್ರಯತ್ನ ಮಾಡುತ್ತೇನೆ. ನಿಮ್ಮೆಲ್ಲರ ಸಹಕಾರವಿರಲಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ವೇಳೆ ಭಾವುಕರಾಗಿ ನುಡಿದರು.

ನಮ್ಮ ಸರಕಾರ ಜನರ ನೋವಿಗೆ ಸ್ಪಂದಿಸಲು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ತನ್ಮೂಲಕ ಪ್ರತಿ ಕುಟುಂಬದೊಂದಿಗೆ ನಾವಿದ್ದೇವೆ ಎನ್ನುವುದನ್ನು ತೋರಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳ ಮೂಲಕ ಕಾಂಗ್ರೆಸ್ ಸರಕಾರ ನಿಮ್ಮ ಸರಕಾರ ಎನ್ನುವುದನ್ನು ದೃಢಪಡಿಸುತ್ತೇವೆ ಎಂದು ಅವರು ಹೇಳಿದರು.

Home add -Advt

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ​ ಚನ್ನರಾಜ ಹಟ್ಟಿಹೊಳಿ, ಸೋಮಣ್ಣ ಗಾವುಡಾ, ಯುವರಾಜ ಕದಂ,​ ಮಲ್ಲೇಶ ಚೌಗಲೆ, ಫಾದರ್ ರಮೇಶ ಫರ್ನಾಂಡೀಸ್, ಫಾದರ್ ಅಘುನೇಲ್, ಬಾಳು ದೇಸೂರಕರ್, ಮನೋಹರ್ ಬೆಳಗಾಂವ್ಕರ್, ರಂಜನಾ ಗಾವುಡಾ, ನಾರಾಯಣ ಚೌವ್ಹಾನ್, ದಯಾನಂದ ಗಾವುಡಾ, ಬಾಹು ಜಾಧವ್, ಶಿವಾಜಿ ಬೇಡಿಗೆಕರ್, ಸುನಿತಾ ತಳವಾರ, ಶಿವಾಜಿ ಪಾಟೀಲ, ಮಹಾದೇವ ಪಾಟೀಲ, ಕೃಷ್ಣ ಗಾವುಡಾ, ಗುರುನಾಥ್, ರಾಜು ಕೀಣೆಕರ್, ರೆಹಮಾನ್ ತಹಶಿಲ್ದಾರ, ಶಿವಾಜಿ ಬೋಕಡೆ, ಸುರೇಶ ಕೀಣೆಕರ್, ಅಶೋಕ ಗಾವುಡಾ ಮುಂತಾದವರು ಉಪಸ್ಥಿತರಿದ್ದರು.

​ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button