34 ವರ್ಷಗಳ ಸುದೀರ್ಘ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ ವಿಠ್ಠಲ ಹಲಗೇಕರ ಅವರಿಗೆ ಸನ್ಮಾನ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ಗರ್ಲಗುಂಜಿ ಗ್ರಾಮದ ಮಾವುಲಿ ವಿದ್ಯಾಲಯ ಬಾಲಕಿಯರ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ 34 ವರ್ಷಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿದ ವಿಠ್ಠಲ ಹಲಗೇಕರ ಅವರು ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರನ್ನು ಶಾಲೆಯ ಸಭಾಗೃಹದಲ್ಲಿ ಮಂಗಳವಾರ ಜರುಗಿದ ಕಾರ್ಯಕ್ರಮದಲ್ಲಿ ದಂಪತಿಸಮೇತ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಣಕುಂಬಿ ಮಾವುಲಿ ವಿದ್ಯಾಲಯದ ಮುಖ್ಯ ಶಿಕ್ಷಕ ಸುನೀಲ ಚಿಗುಳಕರ, 1988ರಲ್ಲಿ ಗರ್ಲಗುಂಜಿಯ ಮಾವುಲಿ ವಿದ್ಯಾಲಯಕ್ಕೆ
ಅನುದಾನರಹಿತ ವಿಜ್ಞಾನ ಶಿಕ್ಷಕರಾಗಿ ಸೇವೆಗೆ ಸೇರಿದ ಹಲಗೇಕರ ಅವರು, ಪ್ರಾರಂಭದ ಎಂಟು ವರ್ಷಗಳ ಕಾಲ ಸಂಬಳರಹಿತ ಶಿಕ್ಷಣ ನೀಡಿದರು. 1995ರಲ್ಲಿ ನೌಕರಿಗೆ ಅನುಮೋದನೆ ದೊರೆತ
ಬಳಿಕ ತಮ್ಮ ಸೇವೆಗೆ ತಕ್ಕ ಸಂಬಳವನ್ನು ಪಡೆದರು. 34 ವರ್ಷಗಳ ತಮ್ಮ ಅನುಭವದ ಮೂಲಕ ಇವರು ಅನೇಕ ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿಸಲು ಶ್ರಮಿಸಿದರು. ಇಂದು
ಅವರಿಂದ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಎರಡು ವರ್ಷಗಳ ಹಿಂದೆ
ಮುಖ್ಯೋಪಾಧ್ಯಾಯ ಹುದ್ದೆಗೆ ಪದೋನ್ನತಿ ನೀಡಿದ್ದು, ಈಗ ಅವರು ವಯೋನಿವೃತ್ತಿ ಹೊಂದಿದ ಬಳಿಕವೂ ತಾಲ್ಲೂಕಿನ ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳಲ್ಲಿ ತಮ್ಮನ್ನು
ತಾವು ತೊಡಗಿಸಿಕೊಳ್ಳಲಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಲಗೇಕರ, ಮಾವುಲಿ ಶಾಲೆಯ ತಮ್ಮ ಸೇವಾವಧಿ ತಾವು ಮಾಡಿದ ಶಿಕ್ಷಕ ವೃತ್ತಿಗೆ ಒಂದು ಅರ್ಥವನ್ನು ನೀಡಿದೆ. ಶಿಕ್ಷಕ ವೃತ್ತಿಯ ತಮ್ಮ ಹಳೆಯ ದಿನಗಳು
ತಮಗೆ ಸಂತೃಪ್ತಿ ಮತ್ತು ನೆಮ್ಮದಿಯನ್ನು ನೀಡಿವೆ. ತಮ್ಮ ಜೀವನದಲ್ಲಿ ಹೆತ್ತವರ ಆಶೀವರ್ಾದ, ಪತ್ನಿ ಬೆಂಬಲ, ಸಹಪಾಠಿಗಳ ಹಾರೈಕೆ, ಬೆಂಬಲಿಗರ ಸಹಕಾರ ಲಭಿಸಿದೆ. ಇವರೆಲ್ಲರಿಗೂ ತಾವು ಚಿರಋಣಿ ಎಂದರು.
ಸನ್ಮಾನ ಕಾರ್ಯಕ್ರಮವನ್ನು ಶಾಲೆಯ ಸಂಸ್ಥಾಪಕ ಜೆ.ಕೆ ಪಾಟೀಲ ಉದ್ಘಾಟಿಸಿದರು. ಗೋಪಾಳ ಪಾಟೀಲ, ಪಾಂಡುರಂಗ ಪಾಟೀಲ, ಸಲೀಂ ಕಿತ್ತೂರ, ಸುನೀಲ ಚಿಗುಳಕರ, ವಾಸುದೇವ ಚೌಗುಲೆ,
ನಂದಕುಮಾರ ನಿಟ್ಟೂರಕರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸದಾನಂದ ಪಾಟೀಲ, ವಿಠ್ಠಲ ಕರಂಬಳಕರ, ಅನೀಲ ಕದಮ, ತುಕಾರಾಮ ಪತ್ರಿ, ವಿಠ್ಠಲ ಹೊಸೂರ,
ಗುಂಡು ಪಾಖರೆ, ಪಿರಾಜಿ ಕುರಾಡೆ, ರಾಜು ಕುಂಬಾರ, ವಾಯ್.ಎಂ ಪಾಟೀಲ, ಭರಮಾಣಿ ಪಾಟೀಲ ಸೇರಿದಂತೆ ಮಾವುಲಿ ಶಾಲೆಯ ಶಿಕ್ಷಕರು, ವಿದ್ಯಾಥರ್ಿಗಳು, ವಿವಿಧ ಸಂಘ ಸಂಸ್ಥೆಗಳ
ಪದಾಧಿಕಾರಿಗಳು, ಗರ್ಲಗುಂಜಿ, ತೋಪಿನಕಟ್ಟಿ ಗ್ರಾಮಗಳ ಪ್ರಮುಖರು, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು, ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮಿ ಗ್ರುಪ್ ಪದಾಧಿಕಾರಿಗಳು ಮತ್ತು
ಆಹ್ವಾನಿತರು ಇದ್ದರು.
https://pragati.taskdun.com/raita-shaktiraita-vidyanidhikrishi-panditakrishi-awardcm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ