*ಹುಲಿ ಬಂದಿದೆ ಎಂದು ಸುಳ್ಳು ವದಂತಿ: ಇಬ್ಬರು ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಚಿರತೆ, ಆನೆ, ಕಾಡು ಪ್ರಾಣಿಗಳು ಆಗಾಗ ಕಾಣಿಸಿಕೊಂಡು ಜನರಿಗೆ ತೊಂದರೆ ಕೊಡುತ್ತಿವೆ. ಈಗ ಹುಲಿ ಪ್ರತ್ಯಕ್ಷವಾಗಿದೆ ಎಂದು ಅರ್ಧ ಹುಲಿ, ಅರ್ಧ ಚಿರತೆಯ ಬಣ್ಣದ ಮಿಶ್ರತಳಿಯ ಹುಲಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರ ವಿರುದ್ಧ ಅರಣ್ಯ ಇಲಾಖೆ ಶಿಸ್ತು ಕ್ರಮ ಜರುಗಿಸಲು ಮುಂದಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಬೆಳಗಾವಿಯ ಕೊಂಡಸಕೊಪ್ಪ ಬಳಿ ಹುಲಿ ಬಂದಿದೆ ಎಂದು ಸುಳ್ಳು ವದಂತಿ ಮಾಡಿ ಹುಲಿ ಓಡಾಟದ ವಿಡಿಯೋ ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುತ್ತಲಿನ ಪ್ರದೇಶದಲ್ಲಿ ತಪಾಸಣೆ ನಡೆಸಿದ್ದಾರೆ.
ಮಿಶ್ರ ತಳಿ ಹುಲಿ ಓಡಾಡಿದೆ ಎಂದು ಹರಿ ಬಿಟ್ಟ ವಿಡಿಯೋದಲ್ಲಿ ಹುಲಿ ಓಡಾಟದ ಯಾವುದೇ ಕುರುಹುಗಳು ಕಂಡು ಬಂದಿಲ್ಲ.
ಹುಲಿ ಬಂದಿಲ್ಲ ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ವೈರಲ್ ವಿಡಿಯೋದಲ್ಲಿ ಮೇಲ್ಭಾಗ ಹುಲಿಯದ್ದು ಕಾಲು ಚಿರತೆಯದ್ದು ಇದೆ. ಎಡಿಟ್ ಮಾಡಿ ವೈರಲ್ ಮಾಡ್ತಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸುತ್ತ ಮುತ್ತಲಿನ ಗ್ರಾಮಸ್ಥರು ಆತಂಕ ಪಡಬೇಕಿಲ್ಲ. ನಿನ್ನೆ ಒಂದು ಕಾಡು ಬೆಕ್ಕು ಕಾಣಿಸಿಕೊಂಡಿದ್ದು ಅದನ್ನ ಸೆರೆ ಹಿಡಿದು ಕಾಡಿಗೆ ಬಿಡಲಾಗುವುದು ಎಂದು ಎಸಿಎಫ್ ನಾಗರಾಜ ತಿಳಿಸಿದ್ದಾರೆ ಎಂದು ವರದಿಯಾಗಿದೆ
ಬೆಳಗಾವಿಯ ಕೊಂಡಸಕೊಪ್ಪ ಯರಮಾಳ ಗ್ರಾಮದ ನಂದಿ ಹಿಲ್ಸ್ ಬಳಿ ಹುಲಿ ಬಂದಿದೆ ಎಂದು ಸುಳ್ಳು ವದಂತಿ ಮಾಡಿ ಹುಲಿ ಓಡಾಟದ ವಿಡಿಯೋ ಎಡಿಟ್ ಮಾಡಿ ವೈರಲ್ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಾಟ್ಸಪ್ ಸ್ಟೇಟಸ್ ಇಟ್ಟುಕೊಂಡಿದ್ದ ಮಲ್ಲೇಶ ದೇಸಾಯಿ ಎಂಬ ಆರೋಪಿ ಮಿಶ್ರ ತಳಿ ಹುಲಿ, ಚಿರತೆ ಇದ್ದ ವಿಡಿಯೋ ಎಡಿಟ್ ಮಾಡಿದ್ದ. ಇದು ಸಿಕ್ಕಾಪಟ್ಟೆ ವೈರಲ್ ಆದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಕೆ.ಕೆ.ಕೊಪ್ಪದ ಗುಡ್ಡದಲ್ಲಿ ಬೀಡು ಬಿಟ್ಟು ಹುಡುಕಾಟ ನಡೆಸಿದರು. ಹುಲಿಯ ಕುರುಹುಗಳು ಪತ್ತೆಯಾಗಲಿಲ್ಲ. ಆದರೆ ಮಿಶ್ರ ತಳಿ ಹುಲಿ ವಿಡಿಯೋ ಎಡಿಟ್ ಮಾಡಿ ಹರಿಬಿಟ್ಟವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ