
ಪ್ರಗತಿವಾಹಿನಿ ಸುದ್ದಿ; ವಿಶಾಕಾಪಟ್ಟಣಂ: ವಿಡಿಯೋ ಮಾಡಿಟ್ಟು ಒಂದೇ ಕುಟುಂಬದ ನಾಲ್ವರು ಚಲಿಸುತ್ತಿದ್ದ ರೈಲುಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಅಂಗಡಿ ಮಾಲೀಕ ಹಾಗೂ ಪೊಲೀಸರ ಕಿರುಕುಳದಿಂದ ಬೇಸತ್ತ ಕುಟುಂಬ ಮನನೊಂದು ಇಬ್ಬರ ಮಕ್ಕಳ ಜೊತೆ ಚಲಿಸುತ್ತಿದ್ದ ರೈಲ ಮುಂದೆ ಹಾರಿ ಪ್ರಾಣಕಳೆದುಕೊಂಡಿದ್ದಾರೆ. ಕರ್ನೂಲ್ ನ ಪನ್ಯಂ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ಬೆಳಕಿಗೆ ಬಂದಿದೆ.
ಅಬ್ದುಲ್ ಸಲಾಮ್ ಶೇಕ್ (45), ಪತ್ನಿ ನೂರ್ಜಹಾನ್ (43), ಪುತ್ರ ದಾದಾ ಖಲಂದರ್ (9) ಹಾಗೂ ಮಗಳು ಸಲ್ಮಾ (14) ಎಂದು ಗುರುತಿಸಲಾಗಿದೆ.
ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ಮೇಲೆ ಕಳ್ಳತನ ಆರೋಪ ಹೋರಿಸಿ ಬಂಧಿಸಲಾಗಿತ್ತು. ಪೊಲೀಸರು ಆತನ ಮೇಲೆ ಮಾರಣಾಂತಿಕವಾಗಿ ಹಲೆ ನಡೆಸಿದ್ದರು. ಕೆಲ ದಿನಗಳ ಬಳಿಕ ಜಾಮೀನಿನ ಮೇಲೆ ಹೊರ ಬಂದು ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದ. ಆದರೂ ಅಂಗಡಿ ಮಾಲೀಕ ಹಾಗೂ ಪೊಲೀಸರ ಕಿರುಕುಳ ಮುಂದುವರೆದಿತ್ತು. ಇದರಿಂದ ಕುಟುಂಬಸಮೇತ ಆತ್ಮಹತ್ಯೆಗೆ ಶರಣಾಗಿದ್ದಾರೆ.