Kannada NewsKarnataka NewsLatest

ನ.18ರಂದು ಬೆಳಗಾವಿಯಲ್ಲಿ ನಂದಿನಿ ಬ್ರಾಂಡ್‌ನ 9 ಹೊಸ ಉತ್ಪನ್ನಗಳ ಬಿಡುಗಡೆ -ಬಾಲಚಂದ್ರ ಜಾರಕಿಹೊಳಿ

 ಪೂರ್ವ ಸಿದ್ಧತಾ ಸಭೆಯಲ್ಲಿ ಹೇಳಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನ.೧೮ ರಂದು ಬೆಳಗಾವಿಯಲ್ಲಿ ೬೭ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದ ಮಹಾಂತೇಶ ನಗರದಲ್ಲಿರುವ ಬೆಳಗಾವಿ ಹಾಲು ಒಕ್ಕೂಟದ ಕಾರ್ಯಾಲಯದಲ್ಲಿ   ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ನ. ೧೮ ರಂದು ನಡೆಯಲಿರುವ ಸಹಕಾರ ಸಪ್ತಾಹ ಕಾರ್ಯಕ್ರಮದ ನೇತೃತ್ವವನ್ನು ಕೆಎಂಎಫ್ ವಹಿಸಿಕೊಳ್ಳಲಿದ್ದು, ಬೆಳಗಾವಿ ಹಾಲು ಒಕ್ಕೂಟ, ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿ, ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕ್ ಸೇರಿದಂತೆ ಜಿಲ್ಲೆಯ ವಿವಿಧ ಸಂಘಗಳು ಈ ಕಾರ್ಯಕ್ರಮಕ್ಕೆ ಸಹಯೋಗ ನೀಡಲಿವೆ ಎಂದು ಹೇಳಿದರು.
ಸಹಕಾರಿ ರಂಗದ ಕಾರ್ಯಕ್ಷಮತೆ ಹಾಗೂ ಕಾರ್ಯಚಟುವಟಿಕೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಸಪ್ತಾಹ ನಡೆಯಲಿದ್ದು, ಇದೊಂದು ರೈತ ಸಹಕಾರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಇದೇ ಸಪ್ತಾಹದ ಸಂದರ್ಭದಲ್ಲಿ ನಂದಿನಿ ಬ್ರಾಂಡ್‌ನ ೯ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ನಂದಿನಿ ಸೆಟ್ ಕರ್ಡ ಉತ್ಪನ್ನವನ್ನು ಬಿಡುಗಡೆ ಮಾಡಿದರು. ಬೆಳಗಾವಿ ತಾಲೂಕಿನ ಕೃತಕ ಗರ್ಭದಾರಣೆ ಕಾರ್ಯಕರ್ತರಿಗೆ ಇನಾಫ್ ತಂತ್ರಾಂಶವನ್ನು ಒಳಗೊಂಡ ಕಂಪ್ಯೂಟರ್ ಟ್ಯಾಬ್‌ನ್ನು ವಿತರಣೆ ಮಾಡಿದರು.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಉದಯಸಿಂಗ್ ಶಿಂಧೆ, ಬಾಬು ಕಟ್ಟಿ, ಎಸ್.ಎಸ್. ಮುಗಳಿ, ವಿರುಪಾಕ್ಷಿ ಈಟಿ, ಮಲ್ಲು ಪಾಟೀಲ, ಪ್ರಕಾಶ ಅಂಬೋಜಿ, ಅಪ್ಪಾಸಾಬ ಅವತಾಡೆ, ಬಾಬು ವಾಘ್ಮೂಡೆ, ಕಲ್ಲಪ್ಪ ಗಿರೆನ್ನವರ, ಸುರೇಶ ಪಾಟೀಲ, ಸವಿತಾ ಖಾನಪ್ಪಗೋಳ, ಸಹಕಾರಿ ಜಂಟಿ ನಿರ್ದೇಶಕ ಜಿ.ಎಂ. ಪಾಟೀಲ, ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಓಬೇದುಲ್ಲಾ ಖಾನ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಪೂರ್ವಸಿದ್ಧತಾ ಸಭೆಯಲ್ಲಿ ಬೆಳಗಾವಿ, ಬಾಗಲಕೋಟ, ಧಾರವಾಡ ಮತ್ತು ವಿಜಯಪುರ ಜಿಲ್ಲೆಗಳ ವ್ಯವಸ್ಥಾಪಕ ನಿರ್ದೇಶಕರುಗಳು ಭಾಗಿಯಾಗಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button