
ಪ್ರಗತಿವಾಹಿನಿ ಸುದ್ದಿ: ಜಮೀನಿನಲ್ಲಿ ಆಕಸ್ಮಿಕವಾಗಿ ಸಂಭವಿಸಿದ್ದ ಬೆಂಕಿ ನಂದಿಸಲು ಹೋಗಿ ರೈತರೊಬ್ಬರು ಸಜೀವದಹನವಾಗಿರುವ ಘೋರ ಘಟನೆ ನಡೆದಿದೆ.
ಎರಡು ಎಕರೆ ಜಮೀನಿನಲ್ಲಿ ರೈತ ತಾಳೆ ಮರ ಹಾಕಿದ್ದರು.ಇದ್ದಕ್ಕಿದ್ದಂತೆ ಜಮೀನಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ಹರಡದಂತೆ ತಡೆಯಲು ಹೋಗಿ ರೈತ ಬೆಂಕಿಗಾಹುತಿಯಾಗಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುರುವ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
ಈಶ್ವರಪ್ಪ ಮೃತ ರೈತ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



