ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕಳೆದ 15 ತಿಂಗಳಿಂದ ನಡೆಯುತ್ತಿದ್ದ ರೈತರ ಸುದೀರ್ಘ ಪ್ರತಿಭಟನೆ ಅಂತ್ಯಗೊಂಡಿದ್ದು, ಡಿಸೆಂಬರ್ 11ರಂದು ರೈತರು ದೆಹಲಿಯಿಂದ ವಾಪಸ್ ಆಗಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ.
ವಿವಾದಿತ ಕೃಷಿ ತಿದ್ದುಪದಿ ಕಾಯ್ದೆ ರದ್ದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಹೋರಾಟ ಸ್ಥಗಿತಗೊಳಿಸುತ್ತಿರುವುದಾಗಿ ಕಿಸಾನ್ ಮೋರ್ಚಾ ತಿಳಿಸಿದೆ.
ಕಳೆದ ಒಂದು ವರ್ಷದಿಂದ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರು. ನಮ್ಮ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆ ರದ್ದು ಸೇರಿದಂತೆ ರೈತರ ಬೇಡಿಕೆಗೆ ಸ್ಪಂದಿಸುವುದಾಗಿ ತಿಳಿಸಿದೆ. ಈಗಾಗಲೇ ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದ್ದು, ರೈತರ ಇನ್ನುಳಿದ ಬೇಡಿಕೆಯನ್ನು ಈಡೇರಿಸುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಗೆಲುವಿನೊಂದಿಗೆ ರೈತರು ಡಿಸೆಂಬರ್ 11ರಂದು ವಾಪಸ್ ಆಗಲಿದ್ದಾರೆ ಎಂದು ಸಂಘು ಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ.
ಇಂದು ಸಂಜೆ ವಿಜಯ ಪ್ರಾರ್ಥನೆ ನಡೆಯಲಿದ್ದು, ಡಿ.11ರಂದು ಸಿಂಘು ಹಾಗೂ ಟಕ್ರಿ ಪ್ರತಿಭಟನಾ ಸ್ಥಳದಿಂದ ರೈತರು ವಿಜಯ ಮೆರವಣಿಗೆ ನಡೆಸಲಿದ್ದಾರೆ. ಡಿ.13ರಂದು ಅಮೃತಸರ ಸ್ವರ್ಣ ಮಂದಿರ ತಲುಪಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಜನವರಿ 15ರಂದು ಪರಿಶೀಲನಾ ಸಭೆ ನಡೆಯಲಿದೆ. ಸರ್ಕಾರ ಭರವಸೆ ಈಡೇರಿಸದಿದ್ದರೆ ಮತ್ತೆ ಹೋರಾಟ ನಡೆಸುವುದಾಗಿ ತಿಳಿಸಿದೆ.
ಸೇನಾಧಿಕಾರಿಗಳ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಅಪಘಾತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ