Kannada NewsKarnataka News

ಕೌಟುಂಬಿಕ ಕಲಹದಿಂದ ದೂರಾಗಿದ್ದ ಮೂರು ಹೆಣ್ಣು ಮಕ್ಕಳ ದಂಪತಿ ಒಂದಾದರು!

ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ಪಟ್ಟಣದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ಕಲಹದಿಂದ ದೂರಾಗಿದ್ದ ಮೂರು ಹೆಣ್ಣು ಮಕ್ಕಳು ಇರುವ ದಂಪತಿಗಳು ಒಂದಾಗಿದ್ದಾರೆ.

ಮೂಡಲಗಿ ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಜೀವನಂಶಕ್ಕಾಗಿ ಸತ್ತೆಪ್ಪ ಕುಬಸದ ವಿರುದ್ದ ಮಲ್ಲವ್ವ ಕುಬಸದ ಪ್ರಕರಣ ದಾಖಲಿಸಿದ್ದರು.

ನ್ಯಾಧೀಶರಾದ ಜ್ಯೋತಿ ಪಾಟೀಲ ದಂಪತಿಗಳಿಗೆ ತಿಳಿವಳಿಕೆ ನೀಡಿ ರಾಜೀ ಮಾಡಿ ಪ್ರಕರಣವನ್ನು ಮುಕ್ತಾಯಗೊಳಿಸಿದರು.

ಲೋಕ ಅದಾಲತ್‌ನಲ್ಲಿ ಒಂದೇ ದಿನ ೮೭೫ ಪ್ರಕರಣಗಳು ನ್ಯಾಧೀಶರಾದ ಜ್ಯೋತಿ ಪಾಟೀಲ ಸಮ್ಮುಖದಲ್ಲಿ ಇತ್ಯರ್ಥವಾಗಿವೆ.

ಸಿವಿಲ್ ಪ್ರಕರಣಗಳು ೩೫. ಕ್ರಿಮೀಲ್ ಪ್ರಕರಣಗಳು ೪, ದಂಡದ ಕ್ರಿಮೀಲ್ ಪ್ರಕರಣಗಳು ೬೪೦, ಬ್ಯಾಂಕ್ ಚೆಕ್ ಪ್ರಕರಣಗಳು ೧೬, ಜನ್ಮ ಪ್ರಮಾಣ ಪತ್ರಗಳ ಪ್ರಕರಣಗಳು ೧೭೫, ಜೀವನಂಶ ಪ್ರಕರಣಗಳು ೫ ಇತ್ಯರ್ಥವಾಗಿವೆ.

ಇನ್ನೂ ಬ್ಯಾಂಕ್ ಹಾಗೂ ಹೆಸ್ಕಂ, ಟಿಎಮ್‌ಸಿ, ಗ್ರಾಪಂ ತೆರಿಗೆ ೨೫,೫೮೪ ಪ್ರಕರಣಗಳಲ್ಲಿ ಒಟ್ಟು ೨ ಕೋಟಿ ಅಧಿಕ ಹಣವನ್ನು ಪಾವತಿಸುವಂತೆ ಆದೇಶ ಮಾಡಲಾಗಿದೆ. ಮೂಡಲಗಿ ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ಸರ್ಕಾರಕ್ಕೆ ಒಟ್ಟು ೬೨ ಲಕ್ಷ ಅಧಿಕ ಹಣವನ್ನು ಪಾವತಿಸಲಾಗಿದೆ ಎಂದು ಕೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
*ಗೋಕಾಕ್: ಗೋಲ್ಡ್ ಉದ್ಯಮಿ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್*

https://pragati.taskdun.com/belagavigold-merchantmurderdoctor/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button