
ಪ್ರಗತಿವಾಹಿನಿ ಸುದ್ದಿ: ಅಳಿಯನನ್ನೇ ಮಾವ ಕೊಡಲಿಯಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಜನ್ನೂರಿನಲ್ಲಿ ನಡೆದಿದೆ.
ಕುಡಿದು ಬಂದು ಮಗಳಿಗೆ ತೊಂದರೆ ಕೊಡುತ್ತಿದ್ದ ಎಂಬ ಕಾರಣಕ್ಕೆ ಬೇಸತ್ತ ಮಾವ ಅಳಿಯನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಉಮೇಶ್ (28) ಕೊಲೆಯಾದ ದುದೈವಿ.
ನಂಜುಂಡಯ್ಯ ಅಳಿಯನನ್ನೇ ಕೊಂದಿರುವ ಮಾವ. ಉಮೇಶ್ ಕುಡಿತದ ದಾಸನಾಗಿದ್ದ. ಸದಾಕಾಲ ಮಗಳಿಗೆ ಹಿಂಸೆ ನೀಡುತ್ತಿದ್ದ. ಅಳಿಯನ ಕಾಟಕ್ಕೆ ನಲುಗಿದ್ದ ಮಗಳ ಸ್ಥಿತಿಯನ್ನು ಕಂಡು ಮರುಗಿದ್ದ ತಂದೆ, ಅಳಿಯನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಕುದೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ