
ಪ್ರಗತಿವಾಹಿನಿ ಸುದ್ದಿ: ತನ್ನ ಸ್ವಂತ ಮೂವರು ಮಕ್ಕಳಿಗೆ ತಂದೆಯೇ ಬೆಂಕಿ ಹಚ್ಚಿ ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಮನ ಕುಲಕುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂದ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಪೆದ್ದಬೋಯಪಲ್ಲಿ ಗ್ರಾಮದ ರಸಗೊಬ್ಬರ ಅಂಗಡಿ ಮಾಲೀಕ ಗುಟ್ಟ ವೆಂಕಟೇಶ್ವರಲು ಎಂದು ಗುರುತಿಸಲಾದ ಆರೋಪಿ ಆಗಸ್ಟ್ 30 ರಂದು ತನ್ನ ಪತ್ನಿ ದೀಪಿಕಾ ಜೊತೆ ಜಗಳವಾಡಿದ್ದ, ಅದೇ ರಾತ್ರಿ ವೆಂಕಟೇಶ್ವರಲು ತನ್ನ ಇಬ್ಬರು ಕಿರಿಯ ಮಕ್ಕಳಾದ ವರ್ಷಿಣಿ ಮತ್ತು ಶಿವಧರ್ಮ ಅವರನ್ನು ಉಪ್ಪನುತಲ ಮಂಡಲದ ಸೂರ್ಯತಾಂಡ ಬಳಿ ಬೆಂಕಿ ಹಚ್ಚಿದ್ದಾನೆ ಎಂದು ಹೇಳಲಾಗುತ್ತಿದೆ.
ನಂತರ ತೆಲಂಗಾಣದ ಅಚಂಪೇಟ್ ಬಳಿಯ ತಂದ್ರಾದಲ್ಲಿ ತನ್ನ ಹಿರಿಯ ಮಗಳು ಮೋಕ್ಷಿತಾಳನ್ನು ಕೊಂದಿದ್ದಾನೆ. ಕೊಲೆ ಬಳಿಕ ಅಚಂಪೇಟ್ನಲ್ಲಿ ಖರೀದಿಸಿದ್ದ ಕೀಟನಾಶಕವನ್ನು ಸೇವಿಸಿ ಸೂಸೈಡ್ ಮಾಡಿಕೊಂಡಿದ್ದಾನೆ. ಅವನ ಶವ ವೆಲ್ಲಂಡ ಮಂಡಲದ ಬುರಕುಂಟಾದಲ್ಲಿ ಪತ್ತೆಯಾಗಿದೆ.