Belagavi NewsBelgaum NewsKannada NewsKarnataka NewsLatest

ಮಾಟ ಮಂತ್ರ ಮಾಡಿಸಿದ್ದಾರೆಂದು ಮಕ್ಕಳ ಕೊಂದ ತಂದೆಗೆ ಜೀವಾವಧಿ ಶಿಕ್ಷೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜುಲೈ 2021 ರಲ್ಲಿ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮನಗರ 2ನೇ ಕ್ರಾಸ್, ಕಂಗ್ರಾಳಿ ಕೆಎಚ್  ಗ್ರಾಮದ ತಮ್ಮ ಮನೆಯ ಮುಂದೆ ಯಾರೋ ಮಾಟಮಂತ್ರ ಮಾಡಿಸಿ ಇಟ್ಟಿರುವ ಬಗ್ಗೆ ಮನನೊಂದ ಆರೋಪಿ ಅನಿಲ್ ಚಂದ್ರಕಾಂತ ಬಾಂದೇಕರ್, ಬೆಳಗಾವಿ ಇವನು  ಅಂಜಲಿ(8) ಮತ್ತು ಅನನ್ಯ(4) ಎಂಬ ತನ್ನ ಎರಡೂ ಹೆಣ್ಣು ಮಕ್ಕಳಿಗೆ ಯಾವುದೋ ವಿಷ ಕುಡಿಸಿ ಕೊಲೆಗೈದಿದ್ದ.

ಆತನ ವಿರುದ್ಧ ಅವನ ಹೆಂಡತಿ ಜಯಾ ಬಾಂಧೇಕರ್ ನೀಡಿದ ದೂರನ್ನು ಆಧರಿಸಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ಆರೋಪಿತನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ಆಗಿನ ತನಿಖಾಧಿಕಾರಿ ಪೊಲೀಸ್ ಇನ್ಸ್ಪೆಕ್ಟರ್  ಮಂಜುನಾಥ ಹಿರೇಮಠ ದೋಷಾರೋಪಣ ಪತ್ರ ಸಲ್ಲಿಸಿದ್ದರು.

 ಈ ಪ್ರಕರಣದಲ್ಲಿ ನಸ್ರೀನ ಬಂಕಾಪುರೆ (ಸಾರ್ವಜನಿಕ ಅಭಿಯೋಜಕರು) ವಾದ ಮಂಡಿಸಿದ್ದರು. 

  ಪೊಲೀಸ್ ತನಿಖೆ ಸಾಕ್ಷಾಧಾರಗಳನ್ನು  ಹಾಗೂ ವಾದವನ್ನು ಆಲಿಸಿದ 6ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಆರೋಪಿತನಿಗೆ ಜೀವಾವಧಿ ಶಿಕ್ಷೆ ಹಾಗೂ 20,000 ದಂಡವನ್ನು ವಿಧಿಸಿ ಶಿಕ್ಷೆ ನೀಡಿದೆ.

Home add -Advt

  ಆರೋಪಿತನಿಗೆ ಶಿಕ್ಷೆ ಕೊಡಿಸುವಲ್ಲಿ ಶ್ರಮಿಸಿದ ಎಪಿಎಂಸಿ ಠಾಣೆ ಪಿಐ ಮಂಜುನಾಥ ಹಿರೇಮಠ ಹಾಗೂ ತನಿಖಾ ಸಹಾಯಕ ವೀರಭದ್ರ ಬೂದನವರ ಕಾರ್ಯವನ್ನು ಪೊಲೀಸ್ ಆಯುಕ್ತ ಯಡಾ ಮಾರ್ಟಿನ ಮಾರ್ಬನ್ಯಾಂಗ ಹಾಗೂ ಡಿಸಿಪಿಗಳು ಪ್ರಶಂಸಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button