Latest

ಮಕ್ಕಳಿಗೆ ಚಿತ್ರಹಿಂಸೆ ನೀಡುತ್ತಿದ್ದ ಅಪ್ಪ; ಕ್ರೂರಿ ತಂದೆ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎರಡನೇ ಪತ್ನಿ ಮಾತು ಕೇಳಿ ಮಕ್ಕಳಿಗೆ ಚಿತ್ರಹಿಂಸೆ ನೀಡಿ ಬಾಸುಂಡೆ ಬರುವಂತೆ ಬಡಿಯುತ್ತಿದ್ದ ಕಿರಾತಕ ತಂದೆಯನ್ನು ಬಂಧಿಸಿ, ಮೂರು ಮಕ್ಕಳನ್ನು ರಕ್ಷಿಸಿರುವ ಘಟನೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ನಡೆದಿದೆ.

ಸೆಲ್ವರಾಜ್ ಬಂಧಿತ ಆರೋಪಿ. ಮಕ್ಕಳು ಹಟ ಮಾಡುತ್ತಾರೆ ಎಂದು ಎರಡನೇ ಪತ್ನಿ ಸತ್ಯಾ ಚಾಡಿ ಹೇಳುತ್ತಿದ್ದು, ಆಕೆ ಮಾತನ್ನು ಕೇಳಿ ಮಕ್ಕಳ ಮೇಲೆ ಕ್ರೌರ್ಯ ಮೆರೆದಿದ್ದಾನೆ. ಮೂವರು ಮಕ್ಕಳ ಕೈಕಾಲು, ಮುಖ, ಪಾದಗಳಿಗೆ ಬಾಸುಂಡೆ ಬರುವಂತೆ ಹೊಡೆದಿದ್ದಲ್ಲದೇ ಮೈಮೇಲೆ ಬರೆ ಎಳೆದಿದ್ದಾನೆ. ತಂದೆಯ ಹೊಡೆತ ಹಿಂಸೆ ತಾಳಲಾರದೆ ಮಕ್ಕಳು ರಕ್ಷಣೆಗಾಗಿ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಅಕ್ಕಪಕ್ಕದವರು ಮಕ್ಕಳನ್ನು ವಿಚಾರಿಸಿದಾಗ ವಿಷಯ ಬಹಿರಂಗವಾದೆ.

ಸ್ಥಳೀಯರು ಜೆ.ಪಿ ನಗರ ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿ ತಂದೆ ಸೆಲ್ವ ಹಾಗೂ ಆತನ ಎರಡನೇ ಪತ್ನಿ ಸತ್ಯಾಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Home add -Advt

Related Articles

Back to top button