Latest

ಅಣಬೆ ತಿಂದು ತಂದೆ-ಮಗ ಇಬ್ಬರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ವಿಷಕಾರಿ ಅಣಬೆ ತಿಂದು ತಂದೆ ಹಾಗೂ ಮಗ ಇಬ್ಬರೂ ಮೃತಪಟ್ಟಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದಲ್ಲಿ ನಡೆದಿದೆ.

ಗುರುವಮೇರ (80) ಹಾಗೂ ಓಡಿಯಪ್ಪ (40) ಮೃತರು. ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಣಬೆಗಳು ಬೆಳೆಯುವುದು ಸಾಮಾನ್ಯ. ಅಣಬೆ ಹಲವರ ಆಹಾರವೂ ಹೌದು. ಆದರೆ ಕಾಡಿನಲ್ಲಿ ಬೆಳೆಯುವ ಹಲವು ಅಣಬೆಗಳಲ್ಲಿ ವಿಷಕಾರಿ ಅಂಶಗಳು ಇರುತ್ತವೆ. ಗುರುವಮೇರ ಹಾಗೂ ಅವರ ಮಗ ಓಡಿಯಪ್ಪ ಕಾಡಿನಿಂದ ಅಣಬೆ ತಂದು ಸಂಬಾರು ಮಾಡಿ ಸೇವಿಸಿದ್ದಾರೆ. ಆದರೆ ಸೇವಿಸಿದ್ದು ವಿಷಕಾರಿ ಅಣಬೆಯಾಗಿದ್ದರಿಂದ ತಂದೆ-ಮಗ ಇಬ್ಬರೂ ಸಾವನ್ನಪ್ಪಿದ್ದಾರೆ.

ಗುರುವಮೇರ ಅವರ ಇನ್ನೋರ್ವ ಮಗ ಇಂದು ಮನೆಗೆ ಬಂದು ನೋಡಿದಾಗ ತಂದೆ ಹಾಗೂ ಸಹೋದರ ಇಬ್ಬರೂ ಶವವಾಗಿ ಬಿದ್ದಿರುವುದು ಕಂಡು ಕಂಗಾಲಾಗಿದ್ದಾರೆ. ತಕ್ಷಣ ಧರ್ಮಸ್ಥಳ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲಿಸಿದಾಗ ವಿಷಕಾರಿ ಅಣಬೆ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿನಿ ಮೇಲೆಯೇ ಹರಿದ ಬಸ್; ಬಾಲಕಿ ದುರ್ಮರಣ; ಇಬ್ಬರ ಸ್ಥಿತಿ ಗಂಭೀರ

https://pragati.taskdun.com/bmtc-busbikeaccidentstudentdeath/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button