ಪ್ರಗತಿವಾಹಿನಿ ಸುದ್ದಿ, ಮಾಂಜರಿ: ಮಕ್ಕಳ ಸಂತೆ ಮಾಡುವುದರಿಂದ ಮಕ್ಕಳಿಗೆ ಲಾಭ ನಷ್ಟದ ಬಗ್ಗೆ ಗೊತ್ತಾಗುತ್ತದೆ. ಗ್ರಾಹಕರು ನೂರು ಕೊಟ್ಟು ಒಂದು ವಸ್ತುಕೊಂಡರೆ ಅದಕ್ಕೆ ಚಿಲ್ಲರೆ ಎಷ್ಟು ಕೊಡಬೇಕು ಎಂಬ ಲೆಕ್ಕ ತಿಳಿಯುತ್ತದೆ. ಇದರಿಂದ ಮಕ್ಕಳು ಹಣದ ಮಹತ್ವ ತಿಳಿದುಕೊಳ್ಳುತ್ತಾರೆ ಎಂದು ಸದಲಗಾ ಮಾಜಿ ಶಾಸಕ ಕಲ್ಲಪ್ಪ ಮಗ್ಗೆನ್ನವರ್ ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಶಾಂತಿ ಸಾಗರ ಶಿಕ್ಷಣ ಪ್ರಸಾರಕ ಮಂಡಳದ ವಿದ್ಯಾರ್ಥಿಗಳ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಂಜರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಅಣ್ಣಾ ಸಾಹೇಬ್ ಯಾದವ್, ದತ್ತ ಶೀತಕರಿ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಅಮರ್ ಯಾದವ್, ಶಿವಾಜಿ ಕ್ರೆಡಿಟ್ ಸೌಹಾರ್ ಸಂಸ್ಥೆಯ ಅಧ್ಯಕ್ಷರಾದ ರಾಮಚಂದ್ರ ಬೋಸಲೆ, ನಿರ್ದೇಶಕರಾದ ಮೋಹನ್ ಲೋಕರೆ, ಶಾಂತಿ ಸಾಗರ್ ಶಿಕ್ಷಣ ಪ್ರಸಾರಕ ಮಂಡಲದ ಕಾರ್ಯದರ್ಶಿಗಳಾದ ದಾದಾಸಾಹೇಬ್ ಬೋಜಕರ್ ಹಾಜರಿದ್ದರು,
ಮಕ್ಕಳ ಸಂತೆಯ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗನ್ನವರ್ ಇವರ ಹಸ್ತದಿಂದ ಹಾಗೂ ವಿವಿಧ ಮಳಿಗೆಯ ಉದ್ಘಾಟನೆಯನ್ನು ಅತಿಥಿ ಗಣ್ಯರಿಂದ ಮಾಡಲಾಯಿತು, ಮಕ್ಕಳು ತಮ್ಮ ವಸ್ತುಗಳ ವಿಲೇವಾರಿಯಾಗಬೇಕಾದರೆ ಗ್ರಾಹಕರನ್ನು ಹೇಗೆ ಸೆಳೆಯಬೇಕು. ಅವರಿಗೆ ತಮ್ಮ ವಸ್ತುಗಳ ಬಗ್ಗೆ ಸರಿಯಾದ ಮಾಹಿತಿ ಕೊಟ್ಟು ಅದರಿಂದಾಗುವ ಪ್ರಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ತಮ್ಮ ವಸ್ತು ಕೊಂಡುಕೊಳ್ಳುವಂತೆ ಮಾಡುವ ಕಲೆ ಕಲಿತುಕೊಳ್ಳುತ್ತಾರೆ ಎಂದು ಕಲ್ಲಪ್ಪ ಮಗ್ಗೆನ್ನವರ್ ಹೇಳಿದರು.
ಈ ಕಾರ್ಯಕ್ರಮಕ್ಕೆ ರಘುನಾಥ್ ಮೋರೆ, ಮನೋಹರ್ ಭೋಜಕರ್, ಬಂಡಿರಾಮ್ ಬೇಡಗೇ, ಶೀತಲ್ ಯಾದವ್, ಶಶಿಕಾಂತ್ ಪಾತೊಳೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಪಾಂಡುರಂಗ ಕುಲಕರ್ಣಿ ಹಾಗೂ ಇನ್ನುಳಿದ ಗಣ್ಯ ನಾಗರಿಕರು, ಶಾಲೆಯ ಶಿಕ್ಷಕರ ಆಡಳಿತ ಮಂಡಳಿಯ ಎಲ್ಲ ಸದಸ್ಯರು ಹಾಜರಿದ್ದರು. ಶಾಂತಿ ಸಾಗರ ಶಿಕ್ಷಣ ಪ್ರಸಾರಕ ಮಂಡಳದ ಅಧ್ಯಕ್ಷರಾದ ಸನತ್ ಕುಮಾರ್ ಪಾಟೀಲ್ ಸ್ವಾಗತಿಸಿದರು.
ವಿದ್ಯಾರ್ಥಿನಿ ಮೇಲೆಯೇ ಹರಿದ ಬಸ್; ಬಾಲಕಿ ದುರ್ಮರಣ; ಇಬ್ಬರ ಸ್ಥಿತಿ ಗಂಭೀರ
https://pragati.taskdun.com/bmtc-busbikeaccidentstudentdeath/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ