Kannada NewsKarnataka NewsLatest

ವಿಟಿಯುನಲ್ಲಿ ಎಫ್ ಡಿಪಿ ಕಾರ್ಯಾಗಾರ  

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ ಟಿ ಯು) ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗವು ಟೆಕ್ಯೂಪ . ಪ್ರಾಯೋಜಕತ್ವದಲ್ಲಿಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಗಾಗಿ ಮಷೀನ್ ಲರ್ನಿಂಗ್ಎಂಬ ವಿಷಯದ ಕುರಿತು ಐದು ದಿನಗಳ  ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ (ಎಫ್ಡಿಪಿ) ಕಾರ್ಯಾಗಾರವನ್ನು ಜನೇವರಿ 28 ರಿಂದ ಫೆಬ್ರುವರಿ 01 ರವರೆಗೆ ಆಯೋಜಿದೆ.

ಇದರ ಉದ್ಘಾಟನಾ ಸಮಾರಂಭವು ಮಂಗಳವಾರ  ವಿತಾವಿಯ ಸೆನೆಟ್ ಹಾಲ್ ನಲ್ಲಿ ನಡೆಯಿತು. ಇದನ್ನು ವಿಪ್ರೊ ಲಿಮಿಟೆಡ್ ಫ್ರೆಷರ್ಸ್ ಎಂಗೇಜ್ಮೆಂಟ್ ಕಾರ್ಯಕ್ರಮದ ಮುಖ್ಯಸ್ಥ ಪಿ. ಬಿ. ಕೊಟುರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ತಾಂತ್ರಿಕವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಇವತ್ತಿನ ಶಿಕ್ಷಕರು ತಮ್ಮ ಉಪನ್ಯಾಸದಲ್ಲಿ ಹೊಸ ರೀತಿಯ ವಿಧಾನಗಳ ಜೊತೆ ಕ್ಷಿಪ್ರ ಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನ ವಿಷಯಗಳನ್ನು ಅರ್ಥೈಸಿಕೊಂಡು ತಮ್ಮ ಬೋಧನೆಯಲ್ಲಿ ಅಳವಡಿಸಿಕೊಳ್ಳಬೇಕು. ಕಾರಣ ಶಿಕ್ಷಕರೆ ವಿದ್ಯಾರ್ಥಿಗಳಿಗೆ ಬದಲಾಗುತ್ತಿರುವ ತಂತ್ರಜ್ಞಾನಗಳ ಬಗ್ಗೆ ಸರಿಯಾಗಿ ಮಾರ್ಗದರ್ಶನ ಮಾಡಬಲ್ಲರು ಮತ್ತು ಅವರೇ ಸಮಾಜದಲ್ಲಿ ಪರಿಣಾಮಕಾರಿ ಬದಲಾವಣೆಯನ್ನು ತರಬಲ್ಲರು ಎಂದು ಹೇಳಿದರು.

ಸಮಾರಂಭದ ಗೌರವ್ ಅತಿಥಿಯಾಗಿದ್ದ ವಿ ತಾ ವಿ ಮೌಲ್ಯಮಾಪನ ಕುಲ ಸಚಿವರಾದ ಡಾ. ಸತೀಶ್ ಅಣ್ಣಿಗೇರಿ ಸಂದರ್ಭದಲ್ಲಿ ಮಾತನಾಡಿ ಶಿಕ್ಷಕರು ಹೊಸ ವಿಷಯಗಳ ಬಗೆಗಿನ ಆಳವಾದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಹೇಳಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿ ತಾ ವಿ ಕುಲಸಚಿವರಾದ ಪ್ರೊ. ಆನಂದ ದೇಶಪಾಂಡೆ ಮಾತನಾಡಿ ಮಷೀನ್ ಲರ್ನಿಂಗ್ ಇವತ್ತಿನ ತಂತ್ರಜ್ಞಾನ ಲೋಕವನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ ಎಂದರೆ ತಪ್ಪಾಗಲಾರದು ಕಾರಣ ತಂತ್ರಜ್ಞಾನದ ಪ್ರತಿ ಕ್ಷೇತ್ರ ಕ್ಷಿಪ್ರ ಗತಿಯಲ್ಲಿ ಬದಲಾಗುತ್ತಿರುವುದಕ್ಕೆ ಮಷೀನ್ ಲರ್ನಿಂಗ್ ಮೂಲ ಕಾರಣ ಎಂದು ಹೇಳಿದರು.

ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಕ್ಷರಾದ ಡಾ.ಎಸ್..ಅಂಗಡಿ ಸ್ವಾಗತಿಸಿದರು. ಎಫ್ಡಿ ಪಿ ಸಂಯೋಜಕ ಡಾ.ಆರ್. ಎಚ್. ಗೌಡರ್, ಎಫ್ಡಿ ಪಿ ಮಹತ್ವ ಮತ್ತು ಉದ್ದೇಶಗಳ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ.ರೋಹಿತ್ ಕಲಿವಾಲ್ ವಂದಿಸಿದರು. ಪ್ರೊ.ರಂಜನಾ ನಾಡಗೌಡರ್ ನಿರೂಪಿಸಿದರು.

ಇದರಲ್ಲಿ ಔದ್ಯೋಗಿಕ ಹಾಗೂ ಮತ್ತು ಸರ್ಕಾರಿ ಸಂಸ್ಥೆಯ ಪ್ರತಿನಿಧಿಗಳು ಸೇರಿದಂತೆ ವಿ ಟಿ ಯು ಸಂಲಗ್ನತೆ ಹೊಂದಿದ ಕಾಲೇಜ್ ಗಳಿಂದ ಸುಮಾರು ೫೦ ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button