Kannada NewsKarnataka NewsLatest

ದೂಧಗಂಗಾ ಸಕ್ಕರೆ ಕಾರ್ಖಾನೆ ವತಿಯಿಂದ ಅಂಗಡಿ, ಜೊಲ್ಲೆಗೆ ಸತ್ಕಾರ

ಪ್ರಗತಿವಾಹಿನಿ ಸುದ್ದಿ, ಮಾಂಜರಿ: 

 ಕೇಂದ್ರದ ರೈಲ್ವೆ ಸಚಿವ  ಸುರೇಶ್ ಅಂಗಡಿ ಹಾಗೂ ಚಿಕ್ಕೋಡಿ ಲೋಕಸಭೆಯ ಮತಕ್ಷೇತ್ರದಿಂದ  ಸಂಸದರಾಗಿ ಆಯ್ಕೆಯಾಗಿರುವ ಅಣ್ಣಾ ಸಾಬ್ ಜೊಲ್ಲೆ ಇವರನ್ನು ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ವತಿಯಿಂದ ರಾಜ್ಯಸಭಾ ಸದಸ್ಯ ಡಾ ಪ್ರಭಾಕರ ಕೋರೆ ಇವರ ಅಧ್ಯಕ್ಷತೆಯಲ್ಲಿ ಅಂಕಲಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

 ಕಾರ್ಖಾನೆಯ ಉಪಾಧ್ಯಕ್ಷರಾದ ಸಂದೀಪ್ ಪಾಟೀಲ್ ನಿರ್ದೇಶಕ, ವಿಧಾನ ಪರಿಷತ್ತಿನ ಸದಸ್ಯ ಮಹಾಂತೇಶ ಕವಟಗಿಮಠ,  ಭರತೇಶ ಬನವಣೆ, ಅಜೀತ ರಾವ್ ದೇಸಾಯಿ, ಮಲ್ಲಿಕಾರ್ಜುನ ಕೋರೆ, ತಾತ್ಯಾಸಾಹೇಬ ಕಾಟೆ, ಮಲ್ಲಪ್ಪ ಮೈಶಾಳೆ, ರಾಮಚಂದ್ರ ನಿಶಾನದಾರ, ಮಹಾವೀರ ಮಿರ್ಜಿ, ಅಣ್ಣಾಸಾಹೇಬ ಪಾಟೀಲ, ನಂದಕುಮಾರ ನಾಶಿಪುಡಿ ಇವರು ಸನ್ಮಾನಿಸಿದರು. 

 ಜಿಲ್ಲೆಯ ಅಭಿವೃದ್ಧಿಗಾಗಿ ಹಾಗೂ ಸಕ್ಕರೆ ಉದ್ದಿಮೆಗಾಗಿ ಕಾಯಕಲ್ಪ ನೀಡುವ ಸಲುವಾಗಿ ಕೇಂದ್ರದಿಂದ ಬರುವ ಎಲ್ಲ ಯೋಜನೆಗಳನ್ನು ಸದುಪಯೋಗ ಮಾಡಲು  ಪ್ರಯತ್ನಿಸುವುದಾಗಿ ಸುರೇಶ್ ಅಂಗಡಿ ಸನ್ಮಾನ ಸ್ವೀಕರಿಸಿದ ನಂತರ ಹೇಳಿದರು.

ಈ ವೇಳೆ ಚಿಕ್ಕೋಡಿ ಸಂಸದರಾದ ಅಣ್ಣಾ ಸಾಹೇಬ್  ಜೊಲ್ಲೆ ಮಾತನಾಡಿ, ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳಲ್ಲಿ ನನೆಗುದಿಗೆ ಬಿದ್ದಿರುವ ಸಮಸ್ಯೆಗಳನ್ನು ಬಗೆಹರಿಸಲು ತಮ್ಮ ಸಹಕಾರ  ಅಗತ್ಯವಿದ್ದು, ಮುಂಬರುವ ದಿನಮಾನಗಳಲ್ಲಿ ಕೇಂದ್ರದ ಎಲ್ಲ ಯೋಜನೆಗಳನ್ನು ಸಾಮಾನ್ಯ ಜನರಿಗೆ ಮುಟ್ಟಿಸುವ ಕೆಲಸ ಮಾಡಲಾಗುವುದೆಂದು ಹೇಳಿದರು. 

 ಈ ಸನ್ಮಾನ ಸಮಾರಂಭದಲ್ಲಿ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಸದಸ್ಯರು ಹಾಗೂ ಕಾರ್ಮಿಕ ವರ್ಗ ಹಾಜರಿದ್ದರು. 

 ಮನವಿ: 

ಅಂಕಲಿ ಗ್ರಾಮದ ಅಭಿವೃದ್ಧಿಗಾಗಿ ಹಾಗೂ ಕುಡಿಯುವ ನೀರು, ಒಳಚರಂಡಿ ರಸ್ತೆ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ ಅನುದಾನ ಮಂಜೂರಾತಿ ನೀಡಬೇಕೆಂದು ಕೇಂದ್ರದ ರೈಲ್ವೆ ಸಚಿವರಾದ ಸುರೇಶ್ ಅಂಗಡಿ ಅವರಿಗೆ ಅಂಕಲಿ ಗ್ರಾಮ ಪಂಚಾಯಿತಿಯ ವತಿಯಿಂದ ಮನವಿಯನ್ನು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ವಿಧಾನ ಪರಿಷತ್ತಿನ ಸದಸ್ಯ  ಮಹಾಂತೇಶ್ ಕವಟಗಿಮಠ ನೇತೃತ್ವದಲ್ಲಿ ಅರ್ಪಿಸಲಾಯಿತು. 

  ಗ್ರಾಮ ಪಂಚಾಯಿತಿಯ ಅಧ್ಯಕ್ಷ  ಕೃಷ್ಣಾಬಾಯಿ ಚೌಧರಿ, ತುಕಾರಾಮ ಪಾಟೀಲ, ಪಿಂಟು ಹಿರೇಕುರುಬರ, ಪ್ರಭಾಕರ್ ಶಿಂಧೆ,  ಗುಂಡುಕಲ್ಲೆ, ಸುರೇಶ್ ಪಾಟೀಲ್, ವಿವೇಕ ಕಮತೆ ಹಾಜರಿದ್ದರು. 

 

 

 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button