ಅವರು ಹಿಂದೆ ಏನೇಲ್ಲಾ ಮಾಡಿದಾರೆ ಎಂಬುದು ನಮಗೂ ಗೊತ್ತಿದೆ – ಸಿಎಂ

ಪ್ರಗತಿವಾಹಿನಿ ಸುದ್ದಿ, ವಿಜಯಪುರ : ವಿಧಾನಸೌಧಕ್ಕೆ ಬೀಗ ಜಡಿದು ಸಚಿವರೆಲ್ಲ ಪ್ರಚಾರಕ್ಕೆ ಬಂದಿದ್ದಾರೆ ಎನ್ನುವ ವಿಪಕ್ಷಗಳ ಟೀಕೆಗೆ ವಿಜಯಪುರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಆ ಥರ ಏನಿಲ್ಲಾ, ಎರಡೆರಡು ಮೂರು ಮೂರು ದಿನ ನಮ್ಮ ಸಚಿವರು ಬಂದುಹೋಗಿ ಮಾಡ್ತಿದ್ದಾರೆ. ಯಾವುದೇ ಸರ್ಕಾರಿ ಕೆಲಸಗಳು ನಿಂತಿಲ್ಲ. ಅವರು ಹಿಂದೆ ಏನೇಲ್ಲಾ ಮಾಡಿದಾರೆ ಎಂಬುದು ನಮಗೂ ಗೊತ್ತಿದೆ ಎಂದಿದ್ದಾರೆ.
ನಾನು ಮಂತ್ರಿಗಳಿಗೆ ಏನು ಸೂಚನೆ ಕೊಡಬೇಕೋ ಕೊಟ್ಟಿದೇನೆ, ಯಾವುದೇ ಕೆಲಸಗಳು ನಿಂತಿಲ್ಲ ಎಂದರು.
ಪ್ರಾದೇಶಿಕ ಪಕ್ಷವನ್ನು ಬಿಜೆಪಿ, ಕಾಂಗ್ರೆಸ್ ಮುಗಿಸುತ್ತವೆ ಎಂದು ದೇವೇಗೌಡರು ನೀಡಿದ ಹೇಳಿಕೆಗೆ,
ಜೆಡಿಎಸ್ ಅನ್ನು ಮುಗಿಸುವ ಪ್ರಶ್ನೆ ಇಲ್ಲ, ನಮ್ಮ ಪಕ್ಷದ ಸಂಘಟನೆ ಮಾತ್ರ ನಾವು ಮಾಡುತ್ತಿದ್ದೇವೆ.
ಇನ್ನೊಂದು ಪಕ್ಷದ ಕಡೆಗೆ ನಾವು ತಿರುಗಿಯೂ ನೋಡೊದಿಲ್ಲ ಎಂದು ಹೇಳಿದರು.
ಜೆಡಿಎಸ್ ಪರವಾಗಿ ಬಿಜೆಪಿ ಹಣ ಹಂಚಿಕೆ ಎಂದು ಜಮೀರ್ ಆರೋಪ ಕುರಿತು ಪ್ರಶ್ನಿಸಿದಾಗ ಇದು ವಿಪರೀತ ಕಲ್ಪನೆ ಅಷ್ಟೆ, ಅದಕ್ಕೆ ಯಾವುದು ಆಧಾರವಿಲ್ಲ ಎಂದರು.

Home add -Advt

Related Articles

Back to top button