Kannada NewsKarnataka News

ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ

ಜಿಲ್ಲಾಡಳಿತದಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಬುಧವಾರ ೭೩ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭವನ್ನು ಆಚರಿಸಲಾಯಿತು.
ಜಿಲ್ಲಾಧಿಕಾರಿಗಳಾದ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಧ್ವಜಾರೋಹಣ ನೆರವೇರಿಸಿ, ಸಾರ್ವಜನಿಕರಿಗೆ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.

ಜಿಲ್ಲಾಧಿಕಾರಿಗಳ ಭಾಷಣ ಓದಿ  – ಸಂತ್ರಸ್ತರ ಮೊಗದಲ್ಲಿ ಮಂದಹಾಸ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ

ಆಕರ್ಷಕ ಪಥಸಂಚಲನ:

ಕವಾಯತ ಕಮಾಂಡರ್ ಪ್ರೋ.ಡಿ.ಸಿ.ಪಿ ಪ್ರವೀಣ ಎಮ್ ಹಾಗೂ ಆರ್‌ಎಸ್‌ಐ ಸಿ.ಎ.ಆರ್ ಸಹಾಯಕ ಕವಾಯತ ಕಮಾಂಡರ್ ಎ.ಎಸ್.ಬೂದಿಗೊಪ್ಪ ಅವರ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ಜರುಗಿತು. ಕೆಎಸ್‌ಆರ್‌ಪಿ, ಸಶಸ್ತ್ರ ಪೊಲೀಸ್, ಕೈಗಾರಿಕಾ ಭದ್ರತಾ ಪಡೆ, ಮಹಿಳಾ ಪೊಲೀಸ್, ಅರಣ್ಯ ಇಲಾಖೆ, ಗೃಹರಕ್ಷಕ ದಳ, ಎನ್‌ಸಿಸಿ, ಸ್ಕೌಟ್ಸ್-ಗೈಡ್ಸ್, ಸೇವಾದಳ, ಮಹೇಶ್ವರಿ ಅಂಧ ಮಕ್ಕಳ ಶಾಲೆಯ ತಂಡದವರು ಪಥಸಂಚಲನ ನಡೆಸಿಕೊಟ್ಟರು.

ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ:

ಇದೇ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶಿವಪ್ಪ ಹನುಮಂತ ಅನಿಗೇರಿ, ರಾಜೇಂದ್ರ ಎಫ್.ಎಫ್.ಕರಲಿಂಗಣ್ಣವರ, ಗಂಗಪ್ಪ. ಮುದಪ್ಪ. ಮಾಳಗಿ, ಆರ್.ಡಿ. ಕಲಘಟಗಿ, ಅಮ್ಮಣ್ಣಾ.ರಾಯಪ್ಪ.ಮೇಟಿ ಅವರನ್ನು ಎಲ್ಲ ಗಣ್ಯಮಾನ್ಯರಿಂದ ಸನ್ಮಾನಿಸಲಾಯಿತು.

ಪಥಸಂಚಲನದಲ್ಲಿ ಪ್ರಶಸ್ತಿ ವಿಜೇತರು:


ಪಥಸಂಚಲನದಲ್ಲಿ ಸಶಸ್ತ್ರಧಾರಿಗಳ ವಿಭಾಗದಲ್ಲಿ ಸಿ.ಎ.ಆರ್ ಬೆಳಗಾವಿ ವಿಭಾಗ ಪ್ರಥಮ ಬಹುಮಾನ, ಡಿ.ಎ.ಆರ್ ಬೆಳಗಾವಿ ಹಾಗೂ ಸಂಚಾರಿ ಪಡೆ ಬೆಳಗಾವಿ ದ್ವಿತೀಯ ಬಹುಮಾನ, ಸಮವಸ್ತ್ರಧಾರಿಗಳ ವಿಭಾಗದಲ್ಲಿ ಅಬಕಾರಿ ಇಲಾಖೆ ತುಕಡಿ ಪ್ರಥಮ ಬಹುಮಾನ, ಮಹಿಳಾ ಪೊಲೀಸ್ ವಿಭಾಗದಲ್ಲಿ ಕೆಎಸ್‌ಆರ್‌ಪಿ ಮಹಿಳಾ ಪಡೆ ಪ್ರಥಮ ಬಹುಮಾನ, ಎನ್‌ಸಿಸಿ ವಿಭಾಗದಲ್ಲಿ ಎನ್‌ಸಿಸಿ ೮ನೇ ಬಿ.ಎನ್ ಏರ್‌ಸ್ಕ್ವಾಡ್ ಪ್ರಥಮ ಹಾಗೂ ಎನ್‌ಸಿಸಿ ೨೬ನೇ ಬಿ.ಎನ್ ಏರ್‌ವಿಂಗ್ ಸೀನಿಯರ್ ದ್ವಿತೀಯ ಬಹುಮಾನ, ಭಾರತ ಸೇವಾದಳ ಅಗಸಗಾ ಪ್ರೌಢಶಾಲೆ ಅಗಸಗಾ ಪ್ರಥಮ ಹಾಗೂ ಮಹಿಳಾ ವಿದ್ಯಾಲಯ ದ್ವಿತೀಯ ಬಹುಮಾನ, ಶಾಲಾ ತಂಡಗಳ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಎಸ್.ಪಿ.ಸಿ ವಡಗಾಂವ, ಮಹೇಶ್ವರಿ ಅಂಧ ಮಕ್ಕಳ ಶಾಲೆ ಹಾಗೂ ಪೊಲೀಸ್ ಬ್ಯಾಂಡ್ ವಿಶೇಷ ಬಹುಮಾನ ಪಡೆದವು.
ಪ್ರಶಸ್ತಿ ವಿಜೇತ ತಂಡಗಳಿಗೆ ವೇದಿಕೆಯಲ್ಲಿ ಗಣ್ಯರು ಬಹುಮಾನ ವಿತರಿಸಿ ಸನ್ಮಾನಿಸಿದರು.

ಮಾಜಿ ಲೋಕಸಭಾ ಸದಸ್ಯರಾದ ಪ್ರಕಾಶ ಹುಕ್ಕೇರಿ, ನಗರ ಶಾಸಕರಾದ ಅಭಯ ಪಾಟೀಲ, ಅನೀಲ ಬೆನಕೆ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಕೆ.ವಿ, ಐಜಿಪಿ ರಾಘವೇಂದ್ರ ಸುಹಾಸ, ಪೊಲೀಸ್ ಆಯುಕ್ತರಾದ ಡಾ.ಬಿ. ಎಸ್.ಲೋಕೇಶ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಲಕ್ಷ್ಮಣ ಅರಸಿದ್ದಿ, ಡಿಸಿಪಿ ಸೀಮಾ ಲಾಟ್ಕರ್, ಯಶೋದಾ ವಂಟಗೋಡೆ, ಅಪರ ಜಿಲ್ಲಾಧಿಕಾರಿ ಡಾ. ಎಚ್.ಬಿ. ಬೂದೆಪ್ಪ, ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ಅಪರ ಪ್ರಾದೇಶಿಕ ಶಶೀಧರ ಕುರೇರ, ಹೆಚ್ಚುವರಿ ಪ್ರಾದೇಶಿಕ ಆಯುಕ್ತ ರಮೇಶ ಕಳಸದ, ಉಪ ವಿಭಾಗಾಧಿಕಾರಿ ಡಾ. ಕವಿತಾ ಯೋಗಪ್ಪನವರ, ನಗರಾಭಿವೃದಿ ಆಯುಕ್ತ ಪ್ರೀತಮ ನಸಲಾಪುರ, ತಹಶೀಲ್ದಾರ ಮಂಜುಳಾ ನಾಯಕ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಸಾರ್ವಜನಿಕರು, ವಿವಿಧ ಶಾಲೆಯ ಮಕ್ಕಳು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ:

ಶಾಲೆಯ ಮಕ್ಕಳು ಮೈದಾನದಲ್ಲಿ ವಿವಿಧ ದೇಶಭಕ್ತಿಯ ಗೀತೆಗಳಿಗೆ ನೃತ್ಯವನ್ನು ಪ್ರಸ್ತುತ ಪಡಿಸಿದರು.
ಹಿರಿಯ ಎಸ್.ಯು.ಜಮಾದಾರ, ಸಹಶಿಕ್ಷಕರಾದ ರಮೇಶ ಗೋಣಿ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಕೃಷ್ಣವೇಣಿ ಅವರು ಕಾರ್ಯಕ್ರಮ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button