Belagavi NewsBelgaum NewsKannada NewsKarnataka NewsLatest

*ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ನಿಂದ ಫೆಲೋಶಿಪ್ ಮತ್ತು ಸ್ಪರ್ಧೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಯುವಜನಾಂಗಕ್ಕೆ ಡಾ. ಬೆಟಗೇರಿ ಕೃಷ್ಣಶರ್ಮ ಅವರ ಬದುಕು – ಬರಹಗಳ ಮಹತ್ವವನ್ನು ತಲುಪಿಸಲು ರಾಜ್ಯ ಮಟ್ಟದ ಸಾಹಿತ್ಯಾಸಕ್ತರಿಗಾಗಿ ಫೆಲೋಶಿಪ್ ಮತ್ತು ಸ್ಪರ್ಧೆಗಳನ್ನು ಆಯೋಜಿಸಿದೆ.

೧. ಡಾ. ಬೆಟಗೇರಿ ಕೃಷ್ಣಶರ್ಮ: ಫೆಲೋಶಿಫ್
ಡಾ. ಬೆಟಗೇರಿ ಕೃಷ್ಣಶರ್ಮ ಅವರ ಸಾಹಿತ್ಯವನ್ನು ಇಂದಿನ ದೃಷ್ಠಿಕೋನದಿಂದ ಮರು ವಿಮರ್ಶೆಗೆ ಒಳಪಡಿಸುವ ಅಧ್ಯಯನಕ್ಕಾಗಿ ಈ ಫೆಲೊಶಿಪ್ ನ್ನು ಇಡಲಾಗಿದೆ.

ನಿಯಮಗಳು
ಅ) ಫೆಲೊಶಿಪ್ ಮೊತ್ತ ೨೫ ಸಾವಿರ.
ಆ) ಅಧ್ಯಯನ ಮತ್ತು ಪ್ರಬಂಧ ಸಲ್ಲಿಕೆಗೆ ಕಡ್ಡಾಯವಾಗಿ ೧ ವರ್ಷದ ಅವಧಿ.
ಇ) ೪೦ ವರ್ಷದೊಳಗಿನವರು ಅರ್ಜಿ ಸಲ್ಲಿಸಬೇಕು.
ಈ) ಅರ್ಜಿಯಲ್ಲಿ ಸ್ವ-ವಿವರ, ಅಧ್ಯಯನ ಮಾಡಬಯಸುವ ವಿಷಯದ ಕುರಿತು ಸಂಕ್ಷಿಪ್ತ ಮಾಹಿತಿ ಇರಬೇಕು.
ಉ) ಅರ್ಜಿ ಸಲ್ಲಿಸಲು ೨೦೨೫ರ ಮೇ ೧೫ ಕೊನೆಯ ದಿನಾಂಕ
೨೦೨೪-೨೫ನೆಯ ವರ್ಷದ ಅಧ್ಯಯನಕ್ಕೆ ಸೂಚಿಸಿದ ವಿಷಯಗಳು.
ಅ) ನವೋದಯ ಕಾವ್ಯ ಮತ್ತು ಬೆಟಗೇರಿ ಕೃಷ್ಣಶರ್ಮರ ಕಾವ್ಯ : ತೌಲನಿಕ ಓದು
ಆ) ಬೆಟಗೇರಿ ಕೃಷ್ಣಶರ್ಮರ ಕಾವ್ಯದಲ್ಲಿ ಮಹಿಳಾ ನಿಲುವು
ಇ) ಬೆಟಗೇರಿ ಕೃಷ್ಣಶರ್ಮರ ಕಥೆಗಳಲ್ಲಿ : ಮಹಿಳಾ ಪ್ರತಿನಿಧೀಕರಣ
ಈ) ಸಾಂಪ್ರದಾಯಿಕತೆಯೊಳಗಿನ ವೈಚಾರಿಕತೆ : ಬೆಟಗೇರಿ ಕೃಷ್ಣಶರ್ಮರ ಕಾವ್ಯ ಅಥವಾ ಕಥೆಗಳು
ಊ) ಬೆಟಗೇರಿ ಕೃಷ್ಣಶರ್ಮರ ಅಭಿವ್ಯಕ್ತಿಯಲ್ಲಿ, ಜೀವನ ಮೌಲ್ಯಗಳು
ಇವುಗಳಲ್ಲಿ ಯಾವುದೇ ಒಂದು ವಿಷಯವನ್ನು ಆಯ್ದುಕೊಳ್ಳಬಹುದು. ಯೋಗ್ಯವೆನಿಸಿದ ಇಬ್ಬರನ್ನು ಸಮಿತಿಯು ಆಯ್ಕೆಮಾಡುವುದು.


೨. ಡಾ. ಬೆಟಗೇರಿ ಕೃಷ್ಣಶರ್ಮ ಕಾವ್ಯ ಸ್ಪರ್ಧೆ
ಡಾ. ಬೆಟಗೇರಿ ಕೃಷ್ಣಶರ್ಮ ಅವರ ಹೆಸರಿನಲ್ಲಿ ರಾಜ್ಯ ಮಟ್ಟದ ಕಾವ್ಯ ಸ್ಪರ್ಧೆಯನ್ನು ಕರೆಯಲಾಗಿದೆ.

Home add -Advt

ನಿಯಮಗಳು:
೧ ಕವಿತೆಗಳು ಸ್ವತಂತ್ರ ವಾಗಿರಬೇಕು.
೨ ಒಬ್ಬರು ಒಂದು ಕವಿತೆಯನ್ನು ಮಾತ್ರ ಕಳುಹಿಸಬೇಕು.
೩ ಸ್ಪರ್ಧೆಗೆ ಕಳುಹಿಸಿದ ಕವಿತೆ ಈ ಹಿಂದೆ ಎಲ್ಲೂ ಯಾವ ಮಾಧ್ಯಮದಲ್ಲೂ ಪ್ರಕಟವಾಗಿರಬಾರದು.
೪ ೩೫ ವರ್ಷದ ಒಳಗಿನವರಿಗೆ ಮಾತ್ರ ಅವಕಾಶ
೫ ಪ್ರಥಮ ರೂ.೫೦೦೦/- ದ್ವಿತೀಯ ರೂ.೩೦೦೦/- ತೃತೀಯ ರೂ.೨೦೦೦/- ಬಹುಮಾನ ನೀಡಲಾಗುವುದು.
೬ ಕವಿಗಳು ತಮ್ಮ ಹೆಸರು ಮತ್ತು ವಿಳಾಸವನ್ನು ಪ್ರತ್ಯೇಕ ಪುಟದಲ್ಲಿ ಕೊಡಬೇಕು.
೭ ಅರ್ಜಿ ಸಲ್ಲಿಸಲು ೨೦೨೫ರ ಮೇ ೧೫ ಕೊನೆಯ ದಿನಾಂಕ


೩. ಡಾ. ಬೆಟಗೇರಿ ಕೃಷ್ಣಶರ್ಮ ಕಥಾ ಸ್ಪರ್ಧೆ
ಡಾ. ಬೆಟಗೇರಿ ಕೃಷಶರ್ಮ ಅವರು ಸಣ್ಣ ಕಥಾ ಲೋಕಕ್ಕೆ ನೀಡಿದ ಆದ್ಯತೆಯನ್ನು ಸ್ಮರಿಸಿ, ರಾಜ್ಯ ಮಟ್ಟದ ಸಣ್ಣ ಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ನಿಯಮಗಳು:
೧ ಕಥೆ ಸ್ವತಂತ್ರವಾಗಿರಬೇಕು.
೨ ಪ್ರಸ್ತುತ ಕಥೆ ಈ ಹಿಂದೆ ಎಲ್ಲಿಯು ಪ್ರಕಟವಾಗಿರಬಾರದು.
೩ ಕಥೆಗಳಿಗೆ ಪದಗಳ ಮಿತಿಯಿಲ್ಲ.
೪ ೩೫ ವರ್ಷದ ಒಳಗಿನವರಿಗೆ ಮಾತ್ರ ಅವಕಾಶ
೫ ಪ್ರಥಮ ರೂ. ೧೦೦೦೦/- ದ್ವಿತೀಯ ರೂ. ೮೦೦೦/- ತೃತೀಯ ರೂ. ೫೦೦೦/-ಬಹುಮಾನವನ್ನು ನೀಡಲಾಗುವುದು.
೬ ಕಥೆಯನ್ನು ತಲುಪಿಸಲು ೨೦೨೫ರ ಮೇ ೧೫ ಕೊನೆಯ ದಿನಾಂಕ

Related Articles

Back to top button