CrimeKannada NewsKarnataka NewsLatest

*ಅಕ್ರಮ ಸಿಲಿಂಡರ್ ಪತ್ತೆ ಮಾಡಿದ ಮಹಿಳಾ ಅಧಿಕಾರಿ: ಆರೋಪಿಗಳನ್ನು ಬಿಟ್ಟುಬಿಡಿ ಎಂದ ಪ್ರಭಾವಿ*

ಪ್ರಗತಿವಾಹಿನಿ ಸುದ್ದಿ : 350 ಅಕ್ರಮ ಸಿಲಿಂಡರ್ ಗಳನ್ನು ಪತ್ತೆ ಮಾಡಿದ ಮಹಿಳಾಧಿಕಾರಿಯೊಬ್ಬರಿಗೆ ಪ್ರಭಾವಿಯೊಬ್ಬರು ಕರೆ ಮಾಡಿ ಆರೋಪಿಗಳನ್ನು ಬಿಟ್ಟು ಕಳಿಸುವಂತೆ ಸೂಚಿಸಿರುವ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಯಲಹಂಕದ ಹೆಚ್‌ಪಿ ಏಜೆನ್ಸಿಯ ಗೋದಾಮಿನಲ್ಲಿ ಅಕ್ರಮ ನಡೆಯುತ್ತಿತ್ತು. ಈ ಬಗ್ಗೆ ಸ್ಥಳೀಯರು ಆಹಾರ ಸರಬರಾಜು ಇಲಾಖೆಗೆ ದೂರು ನೀಡಿದ್ದರು. ಜನರು ನೀಡಿದ ದೂರನ್ನಾಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 350 ಅಕ್ರಮ ಸಿಲಿಂಡ‌ರ್ ಗಳು ಪತ್ತೆಯಾಗಿತ್ತು. ಅನಿಲ ತುಂಬಿದ ಸಿಲಿಂಡರ್ ಗಳನ್ನು ಗೋದಾಮಿನೊಳಗೆ ಅಡಗಿಸಿಟ್ಟು ಕೃತಕ ಅಭಾವ ಸೃಷ್ಟಿಸಲಾಗುತ್ತಿತ್ತು. ಆಹಾರ ಇಲಾಖೆಯ ಅಧಿಕಾರಿಗಳು ಅಕ್ರಮ ಸಿಲಿಂಡರ್ ಗಳನ್ನು ಜಪ್ತಿ ಮಾಡಿದ್ದರು.

ಈ ವೇಳೆ ಪ್ರಭಾವಿ ವ್ಯಕ್ತಿಯೊಬ್ಬರು ಕರೆ ಮಾಡಿ ಆರೋಪಿಗಳನ್ನು ಬಿಟ್ಟುಬಿಡುವಂತೆ ಹಾಗೂ ಸಿಲಿಂಡರ್ ಗಳನ್ನು ಜಪ್ತಿ ಮಾಡದಂತೆ ಸೂಚನೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಅಕ್ರಮ ಹಿಂದಿರುವ ಕಾಣದ “ಕೈ” ಗಳ ಬಗ್ಗೆ ಚರ್ಚೆಯೂ ಆರಂಭವಾಗಿದೆ. ಮಹಿಳಾಧಿಕಾರಿಗಳೊಡನೆ “ಪ್ರಭಾವಿ” ವ್ಯಕ್ತಿ ಮಾತನಾಡುತ್ತಿರುವ ದೃಶ್ಯ ಹಲವು ಮಾಧ್ಯಮ ವರದಿಗಾರರ ಮೊಬೈಲ್ ನಲ್ಲಿ ದಾಖಲಾಗಿದೆ.

ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಅಧಿಕಾರಿಯ ಬಗ್ಗೆ ಮೆಚ್ಚುಗೆ ಸೂಚಿಸಿರುವ ಜನರು, ಅವರ ಮೇಲೆ ಪ್ರಭಾವ ಬೀರಿರುವ ಭ್ರಷ್ಟ ವ್ಯಕ್ತಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೆ ವಿಡಿಯೋದಲ್ಲಿ ಮಹಿಳಾಧಿಕಾರಿ . ಸರ್ ಒಂದಲ್ಲಾ ಎರಡಲ್ಲಾ 350 ಸಿಲಿಂಡರ್ ಗಳಿವೆ. ಇನ್ನು ಮುಂದೆ ಇಂಥವರನ್ನು ಹಿಡಿಯಲು ಹೇಳಬೇಡಿ ನಮಗೆ ಎಂದು ಕೋಪಗೊಂಡಿರುವುದೂ ಸಹ ದಾಖಲಾಗಿದೆ.

Home add -Advt

ಪ್ರಭಾವಿ ವ್ಯಕ್ತಿಯ ಬಗ್ಗೆ ತನಿಖೆಯಾಗಲಿ. ಅಕ್ರಮಗಳು ನಿಲ್ಲಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆಹಾರ ಇಲಾಖೆ ಸಚಿವರಾದ ಮುನಿಯಪ್ಪನವರೇ ಸ್ವತಃ ಅಧಿಕಾರಿಗಳಿಗೆ ಕರೆ ಮಾಡಿ ಆರೋಪಿಗಳನ್ನು ರಕ್ಷಿಸಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಮುನಿಯಪ್ಪನವರು, ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ನಾನು ಯಾವ ಅಧಿಕಾರಿಗೂ ಕರೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದೇ ವೇಳೆ ಮಾಧ್ಯಮಗಳಲ್ಲಿ ಈ ಅಕ್ರಮ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಗೋದಾಮಿನ ಸಿಬ್ಬಂದಿ ಅಕ್ರಮ ಸಿಲಿಂಡರ್ ಗಳನ್ನು ಬೇರೆಡೆಗೆ ಸಾಗಿಸಿದ್ದಾರೆ. ಈ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಸಿಲಿಂಡರ್ ಗಳನ್ನು ರಹಸ್ಯ ಸ್ಥಳಕ್ಕೆ ವರ್ಗಾಯಿಸಲಾಗಿದೆ. 

Related Articles

Back to top button