Kannada NewsLatestNationalPolitics

*ತಮಿಳುನಾಡು ಚುನಾವಣೆ: ಎರಡು ಕ್ಷೇತ್ರಗಳಿಂದ ದಳಪತಿ ವಿಜಯ್ ಸ್ಪರ್ಧೆ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡು ವಿಧಾನಸಭಾ ಚುನಾವಣೆ ಅಖಾಡ ದಿನದಿಂದ ನಕ್ಕೆ ರಂಗೇರುತ್ತಿದೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ 234 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದೆ.

ತಮಿಳಿಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ, ನಟ ವಿಜಯ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ವಿಜಯ್ ಪೆರಂಬೂರು ಮತ್ತು ತಿರುಚಿರಾಪಳ್ಳಿ ಪೂರ್ವದಿಂದ ಸ್ಪರ್ಧಿಸಲಿದ್ದಾರೆ. ಡಿಎಂಕೆ ಜೊತೆ ನೇರ ಹಣಾಹಣಿಗೆ ಸಿದ್ಧವಾಗಿದ್ದಾರೆ.

Home add -Advt

ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಚುನವಣೆ ನಡೆಯಲಿದೆ, ದಳಪತಿ ವಿಜಯ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಜತೆಗೆ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದ್ದಾರೆ.

ಸಿ ಜೋಸೆಫ್ ವಿಜಯ್ ಅವರು ಚೆನ್ನೈನ ಪೆರಂಬೂರು ಮತ್ತು ತಿರುಚಿರಾಪಳ್ಳಿ ಪೂರ್ವದಿಂದ ಸ್ಪರ್ಧಿಸಲಿದ್ದಾರೆ, ಟಿ ನಗರದಿಂದ ಎನ್ ಆನಂದ್, ಮೈಲಾಪುರದಿಂದ ವೆಂಕಟ್ ರಾಮನ್, ವಿಲ್ಲಿವಕ್ಕಂನಿಂದ ಆಧವ್ ಅರ್ಜುನ, ಗೋಬಿಚೆಟ್ಟಿಪಾಳ್ಯಂನಿಂದ ಕೆಎ ಸೆಂಗ್ಕೊಟ್ಟೈಯನ್, ತಿರುಚೆಂಗೋಡ್ನಿಂದ ಕೆ ಜಿ ಅರುಣ್ರಾಜ್ ಮತ್ತು ತಿರುಪ್ಪರಂಕುಂದ್ರಂನಿಂದ ಸಿಟಿಆರ್ ನಿರ್ಮಲ್ ಕುಮಾರ್ ಈ ಪಟ್ಟಿಯಲ್ಲಿದ್ದಾರೆ.

ಥೌಸಂಡ್ ಲೈಟ್ಸ್‌ನಿಂದ ಜೆಸಿಡಿ ಪ್ರಭಾಕರ್, ಕೊಳತ್ತೂರಿನಿಂದ ವಿಎಸ್ ಬಾಬು ಮತ್ತು ಆರ್‌ಕೆ ನಗರದ ಡಾ. ಮಾರಿಯಾ ವಿಲ್ಸನ್ ಅವರುಗಳು ಹೆಸರಿಸಲಾದ ಇತರ ಅಭ್ಯರ್ಥಿಗಳಾಗಿದ್ದಾರೆ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವವರನ್ನು ನಾನು ಆಯ್ಕೆ ಮಾಡಿದ್ದೇನೆ ಎಂದು ಹೇಳಿದ್ದು, ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ಸ್ಪರ್ಧೆಯನ್ನು ನೇರ ಹೋರಾಟ ಎಂದು ಹೇಳುತ್ತಾ, ಇದು ನಮ್ಮ ಮತ್ತು ಸ್ಟಾಲಿನ್ ಸರ್ ಮೈತ್ರಿಕೂಟದ ನಡುವೆ ಮಾತ್ರ ಎಂದು ವಿಜಯ್ ತಿಳಿಸಿದ್ದಾರೆ.

ಉದ್ಯೋಗ ಪಡೆಯಲು ಸಾಧ್ಯವಾಗದ 29 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತಿಂಗಳಿಗೆ 4,000 ರೂ. ಮತ್ತು ಡಿಪ್ಲೊಮಾ ಹೊಂದಿರುವವರಿಗೆ 2,500 ರೂ. ನೀಡುವುದಾಗಿ ಟಿವಿಕೆ ಪಕ್ಷ ಭರವಸೆ ನೀಡಿದೆ. 12 ನೇ ತರಗತಿಯಿಂದ ಪಿಎಚ್‌ಡಿ ಹಂತದವರೆಗೆ 20 ಲಕ್ಷ ರೂ.ಗಳವರೆಗೆ ಮೇಲಾಧಾರ ರಹಿತ ಸಾಲ ಖಾತರಿಗಳನ್ನು ಸಹ ಪ್ರಸ್ತಾಪಿಸಿದೆ.

Related Articles

Back to top button