National

*ಅಪ್ಪಳಿಸಿದ ಫೆಂಗಲ್ ಚಂಡಮಾರುತ: ಮೂವರು ಸಾವು; ಜನಜೀವನ ಸಂಪೂರ್ಣ ಅಸ್ತವ್ಯಸ್ಥ*

ರಾಜ್ಯಕ್ಕೂ ತಟ್ಟಿದ ಸೈಕ್ಲೋನ್ ಎಫೆಕ್ಟ್


ಪ್ರಗತಿವಾಹಿನಿ ಸುದ್ದಿ:
ಫೆಂಗಲ್ ಚಂಡಮಾರುತ ತಮಿಳುನಾಡು, ಪುದುಚೆರಿಗೆ ಅಪ್ಪಳಿಸಿದ್ದು, ಅನಾಹುತಗಳು ಸೃಷ್ಟಿಯಾಗುತ್ತಿವೆ. ಚಂಡಮಾರುತ ಎಂಟ್ರಿಯಾಗುತ್ತಲೇ ಮೂವರನ್ನು ಬಲಿಪಡೆದಿದೆ.

ಇಂದು ಬೆಳಗಿನಜಾವ 2 ಗಂಟೆಸುಮಾರಿಗೆ ತಮಿಳುನಾಡು ಕರಾವಳಿಗೆ ಫೆಂಗಲ್ ಚಂಡಮಾರುತ ಅಪ್ಪಳಿಸಿದೆ. ಭೂಕುಸಿತ, ವಿದ್ಯುತ್ ಅವಘಡದಿಂದಾಗಿ ಮೂವರು ಸಾವನ್ನಪ್ಪಿದ್ದಾರೆ.

ಮುಂದಿನ 48 ಗಂತೆಗಳ ಕಾಲ ತಮಿಳುನಡು, ಪುದುಚೆರಿಯಲ್ಲಿ ಬಿರುಗಳಿ ಸಹಿತ ಭಾರಿ ಮಳೆಯಾಗಲಿದೆ. ಭೂಕುಸಿತ ಸಂಭವಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರ್ನಾಟಕದ ಕರಾವಳಿ ಜಿಲ್ಲೆಗಳಿಗೂ ಚಂದಮಾರುತದ ಪರಿಣಾಮ ಬೀರಲಿದ್ದು, ಕಡಲ ಅಲೆಗಳು ಅಬ್ಬರಿಸಲಾರಂಭಿಸಿವೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಪ್ರವಾಸಿಗರು ಕಡಲ ತೀರಕ್ಕೆ ಹೋಗದಂತೆ ತಿಳಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮೋಡ್ಕವಿದ ವಾತಾವರಣ ಹಾಗೂ ಅಲ್ಲಲ್ಲಿ ಮಳೆಯಾಗಲಿದೆ.

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಿಂದ ನಿರಂತರವಾಗಿ ತುಂತುರು ಮಳೆಯಾಗುತ್ತಿದ್ದು,ಇಂದು ಮಳೆ ಪ್ರಮಾಣ ಜೋರಾಗಿದೆ. ದಟ್ಟವಾದ ಮೋಡ ಕವಿದ ವಾತಾವರಣ ಜೊತೆಗೆ ಮೈ ಕೊರೆವ ಚಳಿಯಿಂದಾಗಿ ಬೆಂಗಳೂರಿಗರು ತತ್ತರಿಸಿದ್ದಾರೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಶುರುವಾಗಿದೆ. ಇನ್ನೂ ಮೂರು ದಿನಗಳ ಕಾಲ ಇದೇ ರೀತಿ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button