ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಫಿಫ್ತ್ ಪಿಲ್ಲರ್ ಎಂಬ ಬಿಸಿನೆಸ್ ಕಾನ್ ಕ್ಲೇವ್ ಬೆಳಗಾವಿಯಲ್ಲಿ ಬುಧವಾರ ನಡೆಯಲಿದೆ.
ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಮಾರ್ಗದರ್ಶನದ ಸಂಘಟನೆ “ಯುವಾ ಬ್ರಿಗೇಡ್” ಹೊಸ ಉದ್ಯೋಗವನ್ನು ಪ್ರಾರಂಭ ಮಾಡಲು ಇಚ್ಛಿಸುವವರು ಹಾಗೂ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮ ಆಯೋಜಿಸಿದೆ.
ಉದ್ಯಮ ಪ್ರಪಂಚದ ಸಾಹಸ ಗಾಥೆಗಳನ್ನು ತಿಳಿಸುವುದರ ಮುಖಾಂತರ ಹೊಸ ಹೊಸ ಉದ್ಯೋಗದಾತರನ್ನು ಸೃಷ್ಟಿ ಮಾಡುವ ಉದ್ದೇಶ ಇದರಲ್ಲಿದೆ.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇದೆ ನ.13ರಂದು ಬೆಳಿಗ್ಗೆ 9.30ಕ್ಕೆ ವಿಟಿಯುದ ಡಾ. ಎ.ಪಿ.ಜೆ. ಅಬ್ದುಲ ಕಲಾಂ ಸಭಾಂಗಣದಲ್ಲಿ ನಡೆಯಲಿದೆ.
ಇದರಲ್ಲಿ ಶ್ರೇಷ್ಠ ಉದ್ಯೋಗಪತಿಗಳು ಹಾಗೂ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳು ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಇದರಲ್ಲಿ ಎಸ್ ಕೆ ಎಫ್ ಡ್ರ್ಯೆರ್ಸ್ ನ ಎಂ ಡಿ ರಾಮಕೃಷ್ಣ ಆಚಾರ್, ಜಗತ್ತಿನ ಅತ್ಯಂತ ಕಿರಿಯ ಸಿ ಎ ಓ ಸುಹಾಸ್ ಗೋಪಿನಾಥ್, ಹೆಸರಾಂತ ನಿರ್ದೇಶಕ, ನಟ ಮತ್ತು ನಿರ್ಮಾಪಕ ರಿಷಬ್ ಶೆಟ್ಟಿ, ಚೈನ್ ಸ್ಪಿನ್ ಸ್ಪಾ ಮತ್ತು ಸಲೂನ್ ಮಾಲೀಕ ನಾಮದೇವ್, ಎಂ ಏನ್ ಉಪ್ಪಿನಕಾಯಿ ಸಂಸ್ಥೆಯ ಮಾಲೀಕ ಸತೀಶ್, ಎಂ ಎಸ್ ಎಂ ಇ ನಿರ್ದೇಶಕ ಗೋಪಿನಾಥ್, ಟೆರಿಯರ್ ಸೆಕ್ಯೂರಿಟಿ ಕಂಪನಿಯ ಮಾಲೀಕ ಕ್ಯಾಪ್ಟನ್ ರವಿ, ಚಕ್ರವರ್ತಿ ಸೂಲಿಬೆಲೆ ಇವರು ಯುವಕರನ್ನು ಉದ್ದೇಶಿಸಿ ಮಾತನಾಡುವರು.
ಜೊತೆಗೆ ಔದ್ಯೋಗಿಕ ಬೆಳವಣಿಗೆ ಹಾಗೂ ಸವಾಲುಗಳ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದಾರೆ. ಇದರಲ್ಲಿ ವಿಟಿಯು ಕುಲಪತಿ ಡಾ. ಕರಿಸಿದ್ದಪ್ಪ, ಕುಲಸಚಿವ ಡಾ. ಎ ಎಸ್ ದೇಶಪಾಂಡೆ ಇವರು ಉಪಸ್ಥಿತರಿರುವರು.
ಇದು ಉಚಿತವಾಗಿದ್ದು ನೋಂದಣಿಗಾಗಿ 8152873124 ಸಂಪರ್ಕಿಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ