
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಈಗ ಸರ್ಕಾರದ ಮುಂದಿರುವ ವರದಿ ಪ್ರಕಾರ ಪ್ರವರ್ಗ 1ಎ ರಲ್ಲಿ ಬರುವ ಅಲೆಮಾರಿ- ಅರೆ ಅಲೆಮಾರಿ ವರ್ಗಗಳಿಗೆ ಆಘಾತ ಉಂಟು ಮಾಡುವ ರೀತಿಯಲ್ಲಿ ಕೆನೆ ಪದರ ನೀತಿಯನ್ನು ಅಳವಡಿಸಲು ಸೂಚಿಸಿರುವುದು ಸರಿಯಾದ ಕ್ರಮವಲ್ಲ. ಇದನ್ನು ಸರ್ಕಾರವು ಕೊಡಲೇ ಸರಿ ಪಡಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ನಾಗರಾಜ ಯಾದವ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಅವರು ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಗೊಲ್ಲ ಸಮುದಾಯದ ಜನ ಸಂಖ್ಯೆ ಸುಮಾರು 30 ಲಕ್ಷಕಿಂತ ಹೆಚ್ಚಾಗಿರುತ್ತದೆ , ನಮ್ಮ ಸಮುದಾಯವನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಿದ್ದು ಒಟ್ಟಾರೆಯಾಗಿ ಗೊಲ್ಲರು ಅತೀ ಹಿಂದುಳಿದ ವರ್ಗಗಳಲ್ಲಿ ಇವೆ. ಗೊಲ್ಲ, ಯಾದವ್, ಹಣಬಾರ್ ಮತ್ತು ಕಾಡುಗೊಲ್ಲ ಸಮುದಾಯಗಳು ಪ್ರಸ್ತುತ ಪ್ರವರ್ಗ 1 ರಲ್ಲಿ ಇರುತ್ತದೆ.
ಈಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಗೊಲ್ಲ ಮತ್ತು ಕಾಡುಗೊಲ್ಲ ಸಮುದಾಯವನ್ನು ಪ್ರವರ್ಗ 1ಎ ರಲ್ಲಿ ಸೇರಿಸಿರುತ್ತಾರೆ. ಯಾದವ್ ರನ್ನು 1ಬಿ ಗೆ ಸೇರಿಸಿ ಗೊಲ್ಲ-ಯಾದವ್ ರನ್ನು ಬೇರ್ಪಡಿಸಿರುವುದು ಖಂಡನೀಯ.
ಈಗ ಸರ್ಕಾರದ ಮುಂದಿರುವ ವರದಿ ಪ್ರಕಾರ ಪ್ರವರ್ಗ 1ಎ ರಲ್ಲಿ ಬರುವ ಅಲೆಮಾರಿ- ಅರೆ ಅಲೆಮಾರಿ ವರ್ಗಗಳಿಗೆ ಆಘಾತ ಉಂಟು ಮಾಡುವ ರೀತಿಯಲ್ಲಿ ಕೆನೆ ಪದರ ನೀತಿಯನ್ನು ಅಳವಡಿಸಲು ಸೂಚಿಸಿರುವುದು ಸರಿಯಾದ ಕ್ರಮವಲ್ಲ.
ಇದನ್ನು ಸರ್ಕಾರವು ಕೊಡಲೇ ಸರಿ ಪಡಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.