Belagavi NewsBelgaum NewsCrimeKannada NewsKarnataka NewsLatest

*ನಂದಗಡ ದಂಪತಿ ಆತ್ಮಹತ್ಯೆ ಕೇಸ್ ಭೇದಿಸಿದ ಪೊಲೀಸರು* *ಖತರನಾಕ್ ಗುಜರಾತ್ ಕಳ್ಳನ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭಾರೀ ಸುದ್ದಿಯಾಗಿದ್ದ ನಂದಗಡ ವೃದ್ಧ ದಂಪತಿ ಆತ್ಮಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತನ್ನ ಮೊಬೈಲ್ ಮೂಲಕ ಬೇರೆಯವರ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಕೊಂಡು ಅದರಲ್ಲಿದ್ದ 6.10ಲಕ್ಷ ರೂ. ಲಪಟಾಯಿಸಿದ್ದ ಸೂರತ್ ವ್ಯಕ್ತಿಯನ್ನು ಬಂಧಿಸಲಾಗಿದೆ.

ಗುಜರಾತದ ಸೂರತ್ ನ ಚಿರಾಗ್ ಜೀವರಾಜಬಾಯ್ ಲಕ್ಕಡ್ ಬಂಧಿತ. ಆತ ನಂದಗಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 32/2025 ಕಲಂ 66(ಡಿ) ಐಟಿ ಕಾಯ್ದೆ ಮತ್ತು ಕಲಂ 108, 308(2), 319(2) ಸಹಕಲಂ 3(5) ಬಿ ಎನ್ ಎಸ್. ಈ ಕೇಸಿನಲ್ಲಿ ಆರೋಪಿಯಾಗಿದ್ದ.

ಆತ್ಮಹತ್ಯೆ ಮಾಡಿಕೊಂಡಿದ್ದ ವೃದ್ದನ ಎಸ್. ಬಿ. ಐ. ಬ್ಯಾಂಕ್ ಖಾತೆಯಿಂದ ಐ ಡಿ ಎಫ್ ಸಿ ಬ್ಯಾಂಕ್ ನ ಬಾಲಾಜಿ ಇಂಡಸ್ಟ್ರಿಜ್ ಹೆಸರಿನಲ್ಲಿ ಇರುವ ಖಾತೆಗೆ ಆನ್ಲೈನ್ ಮೂಲಕ 6,10,000/- ರೂಪಾಯಿ ವರ್ಗವಾಗಿತ್ತು.

Home add -Advt

ಹಣವನ್ನು ಈ ಬ್ಯಾಂಕ್ ಖಾತೆಗೆ ಲಿಂಕ್ ಇದ್ದ ಮೊಬೈಲ್ ನಂಬರನ್ನು ತನ್ನ ಹತ್ತಿರ ಇದ್ದ ಮೊಬೈಲ್ ಗಳಲ್ಲಿ ಬಳಿಸಿ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಚಿರಾಗ್ ವರ್ಗಯಿಸಿದ್ದನು.

ಈತನನ್ನು ದಿನಾಂಕ 14/04/2025 ರಂದು ಬಂಧಿಸಿ ಈ ಹಣವನ್ನು ವರ್ಗಯಿಸಲು ಬಳಸಿದ್ದ ಎರಡು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದು,  ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Related Articles

Back to top button