Kannada NewsLatest

ಬೆಳಗಾವಿಯಲ್ಲಿ ಭಾರತ-ಜಪಾನ್ ಜಂಟಿ ಮಿಲಿಟರಿ ಸಮರಾಭ್ಯಾಸ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಭಾರತ-ಜಪಾನ್ ಜಂಟಿ ಮಿಲಿಟರಿ ಸಮಾರಾಭ್ಯಾಸ ಆರಂಭವಾಗಿದೆ.

ಮರಾಠಾ ಲಘು ಪದಾತಿ ದಳ ಕೇಂದ್ರದಲ್ಲಿ ಉಭಯ ದೇಶಗಳ ಸಮಾರಾಭ್ಯಾಸ ಆರಂಭವಾಗಿದ್ದು, ಇಂದು ಭಾರತ-ಜಪಾನ್ ಜಂಟಿ ಸಮರಾಭ್ಯಾಸ ಅಣಕು ಪ್ರದರ್ಶನ ನಡೆಯಲಿದೆ. 2018 ರಿಂದಲೂ ಜಂಟಿ ಸಮರಾಭ್ಯಾಸ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ.

ಭಾರತೀಯ ಸೇನೆಯ 15ನೇ ಬೆಟಾಲಿಯನ್‌ನ ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್, ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನ 30ನೇ ದಳದ ಯುದ್ಧ ಅನುಭವಿ ಪಡೆಗಳು ಸಮರಾಭ್ಯಾಸದಲ್ಲಿ ಭಾಗಿ ಆಗಿವೆ.

ಅರಣ್ಯ, ದಟ್ಟ ಕಾಡು, ನಗರ ಪ್ರದೇಶಗಳಲ್ಲಿನ ಕಾರ್ಯಾಚರಣೆ, ಮನೆಗಳ ಮೇಲಿನ ಡ್ರಿಲ್‌ಗಳು, ಭಯೋತ್ಪಾದಕ ಅಡಗು ತಾಣಗಳ ಮೇಲೆ ದಾಳಿ ನಡೆದಾಗ ಕೈಗೊಳ್ಳಬೇಕಾದ ಕ್ರಮಗಳು, ನಿರಾಯುಧ ಯುದ್ಧ ಸೇರಿದಂತೆ ಹಲವು ಪ್ರಮುಖ ರೀತಿಯ ತರಬೇತಿ, ಸಮರಾಭ್ಯಾಸಗಳು ನಡೆಯುತ್ತಿವೆ.
ಮುಂಬೈ ಮೂಲದ ಗ್ಯಾಂಗ್ ಸ್ಟರ್ ಬಂಧನ

Home add -Advt

Related Articles

Back to top button