
ಪ್ರಗತಿವಾಹಿನಿ ಸುದ್ದಿ; ಜೈಪುರ: ಇನ್ಮುಂದೆ ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದ ಪತ್ರಕರ್ತರಿಗೂ ಮಾನ್ಯತೆ ನೀಡಲಾಗುವುದು ಎಂದು ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಜೈಪುರದಲ್ಲಿ ಮಾತನಾಡಿದ ಸಚಿವರು,ಈ ಇಂದೆ ಏಕಮುಖವಾಗಿ ಸುದ್ದಿ ಸಂವಹನ ನಡೆಯುತ್ತಿತ್ತು. ಆದರೆ ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳ ಬೆಳವಣಿಗೆಯಿಂದ ಈಗ ಬಹು ಆಯಾಮಗಳಲ್ಲಿ ಸುದ್ದಿ ಸಂವಹನ ನಡೆಯುತ್ತಿದೆ. ಮಾಧ್ಯಮದವರು ತಮ್ಮ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿ ಕಾನೂನು ಜಾರಿಗೆ ತರಲಾಗುವುದು. ಕೇಂದ್ರ ಸರ್ಕಾರ ಸುಗಮ ವ್ಯಾಪಾರ ಮತ್ತು ಸುಗಮ ಜೀವನ ನಿರ್ವಹಣೆ ಕಲ್ಪಿಸಲು ಶ್ರಮಿಸುತ್ತಿದೆ. ಕಂಪನಿಗಳ ನೋಂದಣಿಯಲ್ಲಿನ ಬದಲಾವಣೆ ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಲಿದೆ ಎಂದು ಹೇಳಿದರು.
ಮನೋಬಲದಿಂದ ಕನಸುಗಳನ್ನು ಸಾಧಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಸಿಎಂ ಕಿವಿಮಾತು
https://pragati.taskdun.com/cm-basavaraj-bommaibgs-gyms-libraryinauguration/