Kannada NewsLatest
ಭೀಕರ ಅಪಘಾತ; ಬೆಳಗಾವಿಯ ಮೂವರು ಪ್ರವಾಸಿಗರು ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಪಣಜಿ: ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿ ಮೂಲದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋವಾದ ಮಾಪಸಾದ ಕುಚೇಲಿ ಬಳಿ ಸಂಭವಿಸಿದೆ.
ಬೆಳಗಾವಿಯ ನಾಲ್ವರು ನಿನ್ನೆ ಗೋವಾಗೆ ಪ್ರವಾಸ ಹೋಗಿದ್ದರು ಗೋವಾದಿಂದ ಇಂದು ಮುಂಜಾನೆ ವಾಪಸ್ ಆಗುತ್ತಿದ್ದ ವೇಳೆ ಮಾಪಸಾದ ಕುಚೇಲಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ.
ನಾಯರ್ ಅನಗೋಳ್ಕರ್ (28), ರೋಹನ್ ಗಡಾದ್ (26), ಸನ್ನಿ ಅನ್ವೇಕರ್ (31) ಮೃತರು. 27 ವರ್ಷದ ವಿಶಾಲ್ ಕಾರೇಕರ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಬೆಳಗಾವಿಯಿಂದ ಪ್ರವಾಸಕ್ಕಾಗಿ ತೆರಳಿದ್ದರು ಎಂದು ತಿಳಿದುಬಂದಿದೆ.
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕಾರಿನೊಳಗೆ ಆತ್ಮಹತ್ಯೆಗೆ ಶರಣಾದ ಯುವ ಜೋಡಿ
ಈ ಬಾರಿ ಹುಷಾರ್ – ಬೆಳಗಾವಿ BJP ನಾಯಕರ ಸಭೆಯಲ್ಲಿ ಪ್ರಹ್ಲಾದ್ ಜೋಶಿ ಎಚ್ಚರಿಕೆ, ಯಾರಿಗೆ? ಏಕೆ?



