ಪ್ರಗತಿವಾಹಿನಿ ಸುದ್ದಿ, ಗಾಂಧಿನಗರ: ಗುಜರಾತ್ ನ ಹಳೆ ಸೆಕ್ರೆಟರಿಯೇಟ್ ನಲ್ಲಿ ಶುಕ್ರವಾರ ಬೆಂಕಿ ಅನಾಹುತ ಸಂಭವಿಸಿದ್ದು 27 ವರ್ಷಗಳ ಭ್ರಷ್ಟಾಚಾರಗಳ ಕಡತಗಳು ಬೆಂಕಿಗೆ ಆಹುತಿಯಾಗಿವೆ.
ಈ ಘಟನೆ ಮೂಲಕ ಕಾಂಗ್ರೆಸ್ ‘ಕೈ’ಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದ್ದು ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಭ್ರಷ್ಟಾಚಾರವನ್ನು ಮರೆಮಾಚಲು ಸರಕಾರದ ಕಡತಗಳನ್ನು ಸುಡುವ ಬಿಜೆಪಿಯ ಪ್ರಯತ್ನ ಇದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
“ಬಿಜೆಪಿಗೆ ಈ ಬಾರಿಯ ಚುನಾವಣೆ ನಂತರ ಅಧಿಕಾರದಿಂದ ಹೊರಹೋಗುವ ಅರಿವಿದೆ. ಈ ಭೀತಿಯಲ್ಲಿ 27 ವರ್ಷಗಳ ಭ್ರಷ್ಟಾಚಾರದ ಕಡತಗಳನ್ನು ಸುಟ್ಟು ಹಾಕಲಾಗುತ್ತಿದೆ” ಎಂದು ಕಾಂಗ್ರೆಸ್ ದೂರಿದೆ.
ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಭಾರಿ ಮಳೆ; ಕಟ್ಟೆಚ್ಚರ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ