Latest

ಭಾರಿ ಮಳೆ; ನದಿ ನೀರಿನಲ್ಲಿ ಕೊಚ್ಚಿ ಹೋದ ಯುವಕರು

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ಭಾರಿ ಮಳೆಯಿಂದಾಗಿ ನದಿ, ಹಳ್ಳ ಕೊಳ್ಳಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ನದಿ ನೀರಿನ ರಭಸಕ್ಕೆ ಬೈಕ್ ಸವಾರರಿಬ್ಬರು ಕೊಚ್ಚಿ ಹೋದ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ನಡೆದಿದೆ.

ಗೌರಿಬಿದನೂರು ತಾಲೂಕಿನ ಇಡಗೂರು ಜಾಲಹಳ್ಳಿಯಲ್ಲಿ ಸೇತುವೆ ಮೇಲೆ ಕುಮದ್ವತಿ ನದಿ ಪ್ರವಾಹದಂತೆ ಹರಿಯುತ್ತಿದ್ದು, ಸೇತುವೆ ದಾಟುವ ವೇಳೆ ನೀರಿನ ರಭಸಕ್ಕೆ ಯುವಕರಿಬ್ಬರು ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.

38 ವರ್ಷದ ಪ್ರಶಾಂತ್ ಕುಮಾರ್ ಹಾಗೂ 30 ವರ್ಷದ ಬಸವರಾಜ್ ನೀರಿನಲ್ಲಿ ಕೊಚ್ಚಿ ಹೋದವರು. ಬಸವರಾಜ್ ಸಾವನ್ನಪ್ಪಿದ್ದು, ಪ್ರಶಾಂತ್ ಎಂಬಾತನನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸಿದ್ದಾರೆ.

ಮೃತ ಯುವಕ ಶಿರಾ ಆಲೂಕಿನ ಕಣವಗೆರೆ ಹಳ್ಲಿಯ ನಿವಾಸಿ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಭಾರಿ ಮಳೆ; ಕಟ್ಟೆಚ್ಚರ ಘೋಷಣೆ

https://pragati.taskdun.com/latest/karnatakaheavy-rain4days/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button