Latest

“ಎರಡು ದಿನಗಳ ಸೋಶಿಯಲ್ ಮೀಡಿಯಾ ಬಳಕೆ ನನ್ನ ಐದು ವರ್ಷಗಳನ್ನೇ ನುಂಗಿತು” ಎಂದ ನಿರ್ದೇಶಕ

ಪ್ರಗತಿವಾಹಿನಿ ಸುದ್ದಿ, ಮುಂಬೈ: “ಎರಡು ದಿನಗಳ ಸೋಶಿಯಲ್ ಮೀಡಿಯಾ ಬಳಕೆ ನಮ್ಮ ಜೀವನದ ಐದು ವರ್ಷಗಳನ್ನೇ ನುಂಗಿ ಹಾಕಿದೆ” ಎಂದು ರಣಬೀರ್ ಕಪೂರ್ ಅಭಿನಯದ ‘ಶಂಶೇರಾ’ ಚಿತ್ರದ ನಿರ್ದೇಶಕ ಕರಣ ಮಲ್ಹೋತ್ರಾ ಹೇಳಿಕೊಂಡಿದ್ದಾರೆ.

ಮಿಡ್ ಡೇ ಡಾಟ್ ಕಾಂ ಸಂದರ್ಶನದಲ್ಲಿ ಅವರು ಈ ಮಾತು ಹೇಳಿಕೊಂಡಿದ್ದಾರೆ. ರಣಬೀರ್ ಕಪೂರ್ ಅವರಿಗೆ ಇನ್ಸ್ಟಾಗ್ರಾಂ ಬಳಸಲು ನೀವು ಹೇಳಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ  ನಟಿ ವಾಣಿ ಕಪೂರ್ , “ಈ ಹಿಂದೆ  ‘ವಾರ್’ ಚಿತ್ರದ ವೇಳೆ ಸಿಧ್ಧಾರ್ಥ ಆನಂದ್ ಸೋಶಿಯಲ್ ಮಿಡಿಯಾಕ್ಕೆ ಬಂದಿದ್ದರು. ಚಿತ್ರ ಬಿಡುಗಡೆ ನಂತರ ಅವರು ಸೋಶಿಯಲ್ ಮೀಡಿಯಾ ಖಾತೆ ಮುಚ್ಚಿದ್ದರು. ಇವರಿಗೆ ನಾನು ಹೇಳಿದರು ಕೇಳುತ್ತಿಲ್ಲ” ಎಂದರು.

ಈ ವೇಳೆ ಮಧ್ಯ ಪ್ರವೇಶಿಸಿದ ಕರಣ ಮಲ್ಹೋತ್ರಾ “ನಾನು ಸೋಶಿಯಲ್ ಮೀಡಿಯಾ ವಿರೋಧಿ. ಎರಡು ದಿನಗಳ ಸೋಶಿಯಲ್ ಮೀಡಿಯಾ ಬಳಕೆ ನನ್ನ 5 ವರ್ಷಗಳ ಜೀವನ ನುಂಗಿಹಾಕಿದೆ” ಎಂದು ಹೇಳಿಕೊಂಡರು.

ಇಲಿ ಪಾಷಾಣ ಸೇವಿಸಿ ಮಹಿಳೆ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button