Latest

ಚಲಿಸುತ್ತಿದ್ದ ಬಸ್ ನಲ್ಲಿ ಯುವತಿಯನ್ನು ಚುಂಬಿಸಿದ ಅಪರಿಚಿತ; ಯುವಕನ ವಿರುದ್ಧ ದಾಖಲಾಯ್ತು ಕೇಸ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ನಲ್ಲಿ ಅಪರಿಚಿತ ಯುವಕನೊಬ್ಬ ಯುವತಿಗೆ ಮುತ್ತಿಟ್ಟು ಬಸ್ ಇಳಿದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತಿದ್ದ ಬಳ್ಳಾರಿ ಮೂಲದ ವಿದ್ಯಾರ್ಥಿನಿ ಗೌರಿ-ಗಣೇಶ ಹಬ್ಬಕ್ಕೆಂದು ಊರಿಗೆ ಹೋಗಿ ಕೆ ಎಸ್ ಆರ್ ಟಿಸಿ ಬಸ್ ನಲ್ಲಿ ವಾಪಸ್ ಆಗುತ್ತಿದ್ದಳು. ಈ ವೇಳೆ ಯುವತಿ ಪಕ್ಕದ ಸೀಟ್ ನಲ್ಲಿಯೇ ಕುಳಿತು ತೆಲುಗಿನ ‘ಗೀತ ಗೋವಿಂದಂ’ ಸಿನಿಮಾ ವೀಕ್ಷಿಸುತ್ತಿದ್ದ ಯುವಕ, ಟಿ.ದಾಸರಹಳ್ಳಿ-ಜಾಲಹಳ್ಳಿ ಕ್ರಾಸ್ ಬಳಿ ಸಿನಿಮಾ ಸ್ಟೈಲ್ ನಲ್ಲೇ ಯುವತಿ ಕೆನ್ನೆಗೆ ಮುತ್ತಿಟ್ಟು ತಕ್ಷಣ ಬಸ್ ನಿಂದ ಇಳಿದುಬಿಟ್ಟಿದ್ದಾನೆ.

ಬೆಳಿಗ್ಗೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಯುವತಿ ಮಾನಹಾನಿ ಆರೋಪದಡಿ ಯುವಕನ ವಿರುದ್ಧ ಪೀಣ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಅಪರಿಚಿತ ಯುವಕನ ವಿರುದ್ಧ ಐಪಿಸಿ ಸೆಕ್ಷನ್ 354A, 354ರಡಿ ಪ್ರಕರಣ ದಾಖಲಾಗಿದೆ.

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಮತ್ತೆ ಇಡಿ ಸಮನ್ಸ್

Home add -Advt

Related Articles

Back to top button