Cancer Hospital 2
Beereshwara 36
LaxmiTai 5

*ರೈತ ಹೋರಾಟಗಾರ್ತಿ ಜಯಶ್ರೀ ಗುರಣ್ಣವರಗೆ ಅಂತಿಮ ನಮನ: ಶೋಕ ಸಾಗರದಲ್ಲಿ ಮುಳುಗಿದ ಹೋರಾಟಗಾರರು *

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಬ್ರೇನ್ ಸ್ಟ್ರೋಕ್ ನಿಂದ ಬಳಲುತ್ತಿದ್ದ ರೈತ ಹೋರಾಟಗಾರ್ತಿ ಜಯಶ್ರೀ ಗುರಣ್ಣವರ ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ನಿಧನ ಹೊಂದಿದ್ದರು.‌ ಅವರ ಅಂತ್ಯಕ್ರಿಯೆ ಇಂದು ಅಪಾರಪ್ರಮಾಣದ ಅಭಿಮಾನಿಗಳ ಉಪಸ್ಥಿತಿಯಲ್ಲಿ ಸುಳಗಾ ಗ್ರಾಮದಲ್ಲಿ ನೇರವೇರಿತು.

ಬ್ರೇನ್ ಸ್ಟ್ರೋಕ್ ನಿಂದಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಶ್ರೀ ಗುರಣ್ಣವರ ಬುಧುವಾರ ಸಂಜೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದರು. ಇಂದು ಅವರ ಅಂತಿಮಯಾತ್ರೆ ನಗರದಿಂದ ಸುಳಗಾ ಉಚಗಾವ ಗ್ರಾಮದ ವರೆಗೂ ನಡೆಯಿತು. ರಾಣಿ ಚೆನ್ನಮ್ಮ ವೃತ್ತಕ್ಕೆ ಬರುತ್ತಿದಂತೆ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಮೌನಾಚರಣೆ ಮಾಡಲಾಯಿತು.

Emergency Service

ರೈತ ಹೋರಾಟಗಾರ್ತಿ ಜಯಶ್ರೀ ಗುರಣ್ಣವರ ರೈತರ ಮತ್ತು ಕಾರ್ಮಿಕರ ಧ್ವನಿಯಾಗಿ ಹೋರಾಟ ನಡೆಸಿದ್ದರು. ಅವರ ಅಕಾಲಿಕ ನಿಧನದಿಂದ ರೈತವರ್ಗ ಶೋಕ ಸಾಗರದಲ್ಲಿ ಮುಳುಗಿದೆ.

ಚನ್ನಮ್ಮ ವೃತ್ತದ ಬಳಿ‌ ಮಾಧ್ಯಮಗಳ ಜೊತೆ ಮಾತನಾಡಿದ ರೈತ ಹೋರಾಟಗಾರ ಸಿದ್ಧಗೌಡ ಮೋದಗಿ, ರೈತ ಹೋರಾಟಗಾರ್ತಿ ಜಯಶ್ರೀ ಗುರಣ್ಣವರ ಅಕಾಲಿಕ ಮರಣದಿಂದ ರೈತ ಮತ್ತು ಕಾರ್ಮಿಕರ ಹೋರಾಟಕ್ಕೆ ಕುಂದು ಉಂಟಾಗಿದೆ. ರೈತ ಹೋರಾಟಗಾರರಿಗೆ ಜಯಶ್ರೀ ಗುರಣ್ಣವರ ಸಾವು ತುಂಬಿಲಾರದ ನಷ್ಟ ಎಂದರು. 

ನಂತರ ಸುಳಗಾ ಉಚಗಾಂವ ಗ್ರಾಮದಲ್ಲಿ ಜಯಶ್ರೀ ಅವರ ಅಂತ್ಯಕ್ರಿಯೆ ನೇರವೇರಿತು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ಜಯಶ್ರೀ ಗುರಣ್ಣವರ ಅಭಿಮಾನಿಗಳು ಭಾಗಿಯಾಗಿದ್ದರು.

Bottom Add3
Bottom Ad 2