Belagavi NewsBelgaum NewsKannada NewsKarnataka News

ಪ್ರತಿಭಾವಂತ ವಿದ್ಯಾರ್ಥಿನಿಗೆ ಆರ್ಥಿಕ ನೆರವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆರ್ಥಿಕವಾಗಿ ದುರ್ಬಲವಾಗಿರುವ ಪ್ರತಿಭಾವಂತ ವಿದ್ಯಾರ್ಥಿನಿಯೋರ್ವಳಿಗೆ ಇಲ್ಲಿಯ ನಿಯತಿ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

ಬೆಳಗಾವಿಯ ಪ್ರತಿಭಾವಂತ ನರ್ಸಿಂಗ್ ವಿದ್ಯಾರ್ಥಿನಿ ಕಾಂಚನಾ ಪಾಟೀಲ್ ಅವರಿಗೆ 10 ಸಾವಿರ ರೂಪಾಯಿಗಳ ನೆರವು ನೀಡಲಾಯಿತು. ನಿಯತಿ ಫೌಂಡೇಶನ್ ಪರವಾಗಿ ಡಾ.ಸೋನಾಲಿ ಸರ್ನೋಬತ್ ಮತ್ತು ಡಾ.ಸಮೀರ್ ಸರ್ನೋಬತ್ ನೆರವಿನ ಚೆಕ್ ಹಸ್ತಾಂತರಿಸಿದರು.
ಕಾಂಚನಾ ಸ್ಥಳೀಯ ನರ್ಸಿಂಗ್ ಕಾಲೇಜ್ ಒಂದರಲ್ಲಿ ಎರಡನೇ ವರ್ಷದ ನರ್ಸಿಂಗ್ ಕೋರ್ಸ್‌ನಲ್ಲಿ ಓದುತ್ತಿದ್ದಾರೆ. ಆಕೆಯ ತಂದೆ ಮೇಸ್ತ್ರಿ ಮತ್ತು ತಾಯಿ ಗೃಹಿಣಿ. ಕಾಂಚನಾ ಪ್ರತಿಭಾವಂತಳಾಗಿದ್ದು, ನರ್ಸ್ ಆಗಿ ಸೇವೆ ಮಾಡುವ ಕನಸು ಹೊತ್ತಿದ್ದಾಳೆ.

Related Articles

Back to top button