ಪ್ರಗತಿವಾಹಿನಿ ಸುದ್ದಿ, ಕಾಗವಾಡ – ಇತ್ತೀಚಿಗೆ ಸುರಿದ ಬಾರಿಮಳೆ ಹಾಗೂ ಬಿರುಗಾಳಿಯಿಂದ ಮನೆಗಳನ್ನು ಕಳೆದುಕೊಂಡವರಿಗೆ ಶಾಸಕ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.
ಶಾಸಕ ಶ್ರೀಮಂತ ಪಾಟೀಲ ಹಾನಿಗೊಳಗಾರಿವು ಮನೆಗಳನ್ನು ಪರಿಶೀಲಿಸಿ, ಐಆರ್ಥಿಕ ಸಹಾಯ ನೀಡದರಲ್ಲದೆ ಸರಕಾರದಿಂದಲೂ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಕುಸನಾಳ ಗ್ರಾಮದ ಮಹಾದೇವಿ ಸಂಗಪ್ಪ ಮಾದರ, ಮಹಾದೇವಿ ಶರಣಪ್ಪ ಮಾದರ, ಸುವರ್ಣ ಕಾಂಬಳೆ, ನಾಗವ್ವ ಶರಣಪ್ಪ ಮಾದರ, ಚಿದಾನಂದ ಕಾಂಬಳೆ ಅವರ ಮನೆಗಳ ಮೇಲ್ಚಾವಣಿ ಹಾರಿ ಹಾಗೂ ಮರಗಳು ಬಿದ್ದು ಮನೆಗಳು ನಾಶವಾಗಿವೆ.
ಕಾಗವಾಡ ಮತಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವ ಶ್ರೀಮಂತ (ತಾತ್ಯಾ) ಪಾಟೀಲ ಮಂಗಳವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿ, ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಸಹಾಯಧನ ವಿತರಿಸಿ, ಮಳೆ ಗಾಳಿಯಿಂದ ನಾಶವಾದ ಮನೆಗಳನ್ನು ಸರ್ವೆ ಮಾಡಿ ಸರ್ಕಾರದ ವತಿಯಿಂದ ಪರಿಹಾರ ಧನ ವಿತರಿಸಲು ಪ್ರಯತ್ನಿಸಲಾಗುವುದು ಎಂದರು.
ಈ ಸಮಯದಲ್ಲಿ ಕಾಗವಾಡ ತಹಸಿಲ್ದಾರರಾದ ರಾಜೇಶ್ ಬುರ್ಲಿ, ಪಿಎಸ್ಐ ಬಿ ಎಮ್ ರಬಕವಿ, ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರವೀಣ ಹುನಸಿಕಟ್ಟಿ, ಸ್ಥಳಿಯ ಮುಖಂಡರಾದ ಜಯಪಾಲ ಯರಂಡೊಲೆ, ಅಮಿತ ಪಾಟೀಲ, ವಿಜಯ ಖನ್ನಿಕುಡೆ, ಅಶೋಕ ನಾಂದಣಿ, ಚಿದಾನಂದ ಅಥಣಿ, ಸುಶೀಲ ಮಾಂಜರಿ, ಸಂದೀಪ ಮಗದುಮ್ ಹಾಗೂ ಮತ್ತಿತರ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ