Election NewsKannada NewsKarnataka NewsPolitics

*ಯತ್ನಾಳ್ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲು*

ಪ್ರಗತಿವಾಹಿನಿ ಸುದ್ದಿ : ಸಿಎಂ ಸಿದ್ದರಾಮಯ್ಯ ವಿರುದ್ಧ ದ್ವೇಷದ ಭಾಷಣ ಆರೋಪ ಹಿನ್ನಲೆಯಲ್ಲಿ ಶಾಸಕ ಯತ್ನಾಳ್, ಕಲಬುರಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಹಾಗೂ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗಶ್ರೀ ಸೇರಿ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Related Articles

ಕಲಬುರಗಿ ನಗರದ ಸ್ಟೇಷನ್ ಬಜಾ‌ರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಇದೇ ಏಪ್ರಿಲ್ 22ರಂದು ಹುಬ್ಬಳ್ಳಿಯ ನೇಹಾ ಹತ್ಯೆ ಖಂಡಿಸಿ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರು ನಾನಾ ಘೋಷಣೆ ಕೂಗುತ್ತಾ ಗಲ್ಲಿ ಗಲ್ಲಿ ಮೇ ಚಾಕು ಹೈ, ಸಿದ್ದರಾಮಯ್ಯ ಡಾಕು ಹೈ,  ಫೆಕದೋ ಫೆಕದೋ ಕಾಂಗ್ರೆಸ್‌ ಕೊ ಫೆಕದೋ ಎಂದು ಅವಹೇಳನಕಾರಿಯಾಗಿ ಕೂಗಿದ್ದರು. 

ಘಟನೆಯ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದವರು ಯತ್ನಾಳ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಹಿನ್ನಲೆಯಲ್ಲಿ ಇಂದು ಹಲವು ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Home add -Advt

Related Articles

Back to top button