Latest
ಹಡಗಿನಲ್ಲಿ ಬೆಂಕಿ ಅವಘಡ; 32 ಜನರು ಸಜೀವ ದಹನ

ಪ್ರಗತಿವಾಹಿನಿ ಸುದ್ದಿ; ಢಾಕಾ: ಹಡಗಿನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 32 ಪ್ರಯಾಣಿಕರು ಸಜೀವ ದಹನಗೊಂಡಿರುವ ಘಟನೆ ಬಾಂಗ್ಲಾ ದೇಶದ ದಕ್ಷಿಣ ಭಾಗದ ಜಕಾಕತಿ ಟೌನ್ ಬಳಿ ನದಿಯಲ್ಲಿ ನಡೆದಿದೆ.
ಓಬಿಜಾನ್ 10 ಹೆಸರಿನ ಹಡಗಿನಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, 32 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂರು ಅಂತಸ್ತಿನ ಹಡಗು ಇದಾಗಿದ್ದು, 500 ಪ್ರಯಾಣಿಕರು ಇದ್ದರು. ಬೆಂಕಿ ದುರಂತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಢಾಕಾದಿಂದ 250ಕಿ.ಮೀ ದೂರದಲ್ಲಿ ಈ ದುರಂತ ಸಂಭವಿಸಿದೆ.
ಪೊಲೀಸ್ ಕಾನ್ಸ್ ಟೇಬಲ್ ಬಂಧನ




